ಹುನಗುಂದ: ನಮ್ಮ ನಾಡಿನ ಹೆಮ್ಮೆಯ ಚಾಲುಕ್ಯ ಸಾಮ್ರಾಜ್ಯದ ಮಹಾನ್ ರಾಜ ಇಮ್ಮಡಿ ಪುಲಕೇಶಿ ಅವರ ಇತಿಹಾಸ ಸಾಧನೆಗಳು, ಕನ್ನಡ, ಸಾಹಿತ್ಯ, ಸಂಗೀತ, ಸಂಸ್ಕೃತಿ ಹಾಗೂ ಶಿಲ್ಪಕಲೆಯ ವೈಭವವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ, ಇಮ್ಮಡಿ ಪುಲಕೇಶಿಯ ಅವರ ಹೆಸರಿನಲ್ಲಿ ಎಸ್.ಆರ್.ಕೆ ಪ್ರೊಡಕ್ಷನ್ಸ್ ವತಿಯಿಂದ ಚಲನಚಿತ್ರ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿದೆ.
ಈ ಐತಿಹಾಸಿಕ ಚಿತ್ರದಲ್ಲಿ ನಾಯಕ ನಟನಾಗಿ ಡಾಲಿ ಖ್ಯಾತಿಯ ಧನಂಜಯ ಅಭಿನಯಿಸಲಿದ್ದಾರೆ ಎಂದು, ಐಹೊಳೆಯಲ್ಲಿ ನಡೆದ ಮೂರನೇ ದಿನದ ಚಾಲುಕ್ಯ ಉತ್ಸವದ ಭವ್ಯ ಸಮಾರೋಪ ಸಮಾರಂಭದಲ್ಲಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಸ್ಪಷ್ಟಪಡಿಸಿದರು.
ಚಾಲುಕ್ಯರ ಶ್ರೀಮಂತ ಇತಿಹಾಸ, ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ತೆರೆಮೇಲೆ ಜೀವಂತವಾಗಿ ಮೂಡಿಸುವ ಈ ಪ್ರಯತ್ನ ಕನ್ನಡ ಚಿತ್ರರಂಗಕ್ಕೂ ಇತಿಹಾಸಪ್ರೇಮಿಗಳಿಗೋ ವಿಶೇಷ ಮಹತ್ವ ಹೊಂದಿದೆ. ಐಹೊಳೆಯಂತಹ ಐತಿಹಾಸಿಕ ಸ್ಥಳದಲ್ಲಿ ಈ ಘೋಷಣೆ ನಡೆದಿರುವುದು ಚಿತ್ರಕ್ಕೆ ಮತ್ತಷ್ಟು ಗೌರವ ತಂದಿದೆ.
ಸ್ಥಳೀಯ ಸುದ್ದಿಗಳಿಗಾಗಿ 👉 Petkarmedia.com Follow ಮಾಡಿ 📰
ನಿಮ್ಮ ಊರಿನ ಸುದ್ದಿ — ನಿಮ್ಮ ಬೆರಳ ತುದಿಯಲ್ಲಿ 📲
#ಇಮ್ಮಡಿ_ಪುಲಕೇಶಿ#ಚಾಲುಕ್ಯಸಾಮ್ರಾಜ್ಯ#ಡಾಲಿ_ಧನಂಜಯ#ಕನ್ನಡಇತಿಹಾಸ#ಚಾಲುಕ್ಯಉತ್ಸವ#ಐಹೊಳೆ#SRKProductions#Petkarmedia#ಇಮ್ಮಡಿ_ಪುಲಕೇಶಿ#ChalukyaEmpire#KannadaHistory#SRKProductions#DollyDhananjay#KannadaCinema#HistoricMovie#Aihole#ChalukyaUtsava#Kannadigas#ViralKannada


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ