ರೈತರ ಸ್ವಾಭಿಮಾನ ಹಾಗೂ ಸ್ವಾವಲಂಬಿ ಬದುಕಿಗೆ ರೈತ ಸಂತೆ ಪೂರಕ : ನಟ ನವೀನ ಶಂಕರ್

ರಸಾಯನಿಕ ಕಂಪನಿಗಳ ಒಳ ಮರ್ಮ ಬಲ್ಲರ‍್ಯಾರು | ನಮ್ಮ ಹೆಗಲ ಮೇಲೆ ಬಂದೂಕ ಇಟ್ಟು ನಮಗೆ ಗುಂಡು ಹೊಡಿತ್ತಾರ

ಬಾಗಲಕೋಟೆ : ಇಂದು ರೈತರು ಭೂಮಿ ತಾಯಿಗೆ ವಿಷವನ್ನು ಉಣಿಸಿ ನಾವು ವಿಷಯುಕ್ತ ಆಹಾರವನ್ನು ಸೇವಿಸುತ್ತಾ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಎಂದು ಕ್ಷೇತ್ರಪತಿ ಚಲನಚಿತ್ರದ ನಾಯಕ ಹಾಗೂ ಸ್ವತ ರೈತರಾದ ನವೀನ ಶಂಕರ ಹೇಳಿದರು.



ಬಾಗಲಕೋಟೆಯ ನವನಗರದ ಸೆಕ್ಟರ್ ಸಂಖ್ಯೆ ೪ರಲ್ಲಿರುವ ಭಾನುವಾರ ಮಾರುಕಟ್ಟೆ (ಸಂಡೆ ಬಜಾರ್) ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು 'ನಮ್ದು' ರೈತೋತ್ಪಾದಕ ಕಂಪನಿ ವತಿಯಿಂದ ಆಯೋಜಿಸಿರುವ 'ರೈತ ಸಂಘದ ರೈತ ಸಂತೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ರೊಕ್ಕು ತಗೊಂಡು ನಮ್ಮ ಕೈಗೆ ವಿಷ ಕೊಟ್ಟು ನಮಗೆ ಉಣಸಾಕ ಹತ್ತಿದ್ದರು ನಮಗೆ ಇನ್ನೂ ತಿಳಿವದ್ಲು ಅಂದ್ರ ನಮ್ಮ ಹೆಗಲ ಮೇಲೆ ಬಂದೂಕ ಇಟ್ಟು ನಮಗೆ ಹೊಡ್ಯಾಕ ಹತ್ತಿಯಾರ ಈ ರಸಾಯನಿಕ ಕಂಪನಿಗಳು ಅದು ನಮ್ಮ ಜನರಿಗೆ ತಿಳಿಯಾಕ ಹತ್ತಿಲ್ಲ ಎಂದರು.

ಇಲ್ಲಿ ನೈಸರ್ಗಿಕವಾಗಿ ಕೃಷಿ ಮಾಡಿ ಬೆಳದ ರೈತರಿಗೆ ಮಾತ್ರ ಮಾರಾಟ ಮಾಡಲು ಅವಕಾಶವಿದ್ದು ನಮ್ಮ ಜನರು ವಿಷಮುಕ್ತ ಆಹಾರವನ್ನು ಸೇವಿಸಬೇಕು ಎಂದು ಮನವಿ ಮಾಡಿದರು. ರೈತರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವುದರ ಜತೆಗೆ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ನ್ಯಾಯಯುತ ಬೆಲೆ ದೊರೆಯುವಂತಾಗಬೇಕು ಎಂದರು. ರೈತರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು. ನಮ್ಮ ನಾಡಿನ ಅಸ್ತಿತ್ವ ಹಾಗೂ ರೈತರ ಸ್ವಾಭಿಮಾನವನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ. ರೈತರು ತಾವು ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಂಡು, ಕೃಷಿಯಿಂದ ಉತ್ತಮ ಆದಾಯ ಗಳಿಸುವ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರೈತ ಸಂತೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ಜಾಗತೀಕರಣದ ಪ್ರಭಾವದ ನಡುವೆಯೂ ರೈತರ ಬದುಕು, ಕೃಷಿ ಸಂಸ್ಕೃತಿ ಹಾಗೂ ಸ್ವಾಭಿಮಾನವನ್ನು ಉಳಿಸಿಕೊಳ್ಳುವ ಅಗತ್ಯವಿದೆ. ರೈತರು ಸಂಘಟಿತರಾಗಿ ತಮ್ಮ ಉತ್ಪನ್ನಗಳಿಗೆ ತಾವೇ ಮಾರುಕಟ್ಟೆ ಕಂಡುಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.

ಸತ್ವ ರೈತರೇ ನೈಸರ್ಗಿಕವಾಗಿ ಬೆಳೆದ ಬೆಳಗಳನ್ನು ಮಾತ್ರ ನೇರವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನಯ ಸಂಘಟಕರು ಮಾಡಿದ್ದರು.  ಅಲ್ಲದೇ ಈ ಸಂತೆಯಲ್ಲಿ ಯಾವುದೇ ವ್ಯಾಪಾರಸ್ಥರು ಭಾಗವಹಿಸಿಲ್ಲ. ವಿವಿಧ ಬೆಳೆ ಕಾಳುಗಳು ಮತ್ತು ನೈಸರ್ಗಿಕವಾದ ಕಿಲ್ಲಾರಿ ಆಕಳುಗಳ ಜವಾರಿ ತುಪ್ಪಾ, ಶೇಂಗಾ ಎಣ್ಣಿ, ಕುಸಬಿ ಎಣ್ಣಿ, ಜವಾರಿ ಒಣ ಮೆಣಸಿನಕಾಯಿ, ಬಳ್ಳೋಳ್ಳಿ ಹಿರೇಕಾಯಿ, ಶೇಂಗಾ ಚಟ್ನಿ ಸೇರಿದಂತೆ ವಿವಿಧ ಸಿರಿಧಾನ್ಯಗಳನ್ನು ಚಟ್ನಿಗಳಳನ್ನು ಜನರು ಖರೀಧಿ ಮಾಡಿದರು.

ಕಾಮೆಂಟ್‌ಗಳು