ಸುರಕ್ಷಿತ 2026 ಹೊಸ ವರ್ಷಸಂಭ್ರಮಕ್ಕೆ ಕರೆ : ಸಂಚಾರ ನಿಯಮ ಪಾಲನೆಗೆ ಡಿವೈಎಸ್ ಪಿ ಮನವಿ


ಬಾಗಲಕೋಟೆ: 2026ರ ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆ ಯುವಕರು ಹಾಗೂ ಸಾರ್ವಜನಿಕರು ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಡಿವೈಎಸಪಿ ಗಜಾನನ ಸುತಾರ ತಿಳಿಸಿದ್ದಾರೆ.


Petkarmedia:ಡಿವೈಎಸ್ ಪಿಗಜಾನನ ಸುತಾರ

 ಹೊಸ ವರ್ಷದ ಆಚರಣೆ ವೇಳೆ ಮದ್ಯಪಾನ ಸೇವಿಸಿ ವಾಹನ ಚಲಾಯಿಸುವುದು, ತ್ರಿಬಲ್ ರೈಡಿಂಗ್, ಬೈಕ್ ವೀಲಿಂಗ್‌ ಮುಂತಾದ ಅಪಾಯಕಾರಿ ಕೃತ್ಯಗಳಿಂದ ದೂರವಿರಬೇಕು ಎಂದು ಅವರು ಎಚ್ಚರಿಕೆ ನೀಡಿದರು. ಇಂತಹ ಕೃತ್ಯಗಳು ಸ್ವಂತ ಜೀವಕ್ಕೂ, ಇತರರ ಜೀವಕ್ಕೂ ಅಪಾಯವನ್ನುಂಟುಮಾಡುವ ಸಂಭವವಿದ್ದು, ಕ್ಷಣಿಕ ಮೋಜಿಗಾಗಿ ಅಮೂಲ್ಯವಾದ ಪ್ರಾಣ ಕಳೆದುಕೊಳ್ಳಬಾರದು ಎಂದು ಹೇಳಿದರು.

ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಹೆಲ್ಮೆಟ್ ಧರಿಸುವುದು, ನಿಗದಿತ ವೇಗ ಮಿತಿಯಲ್ಲಿ ವಾಹನ ಚಾಲನೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಹೊಸ ವರ್ಷವನ್ನು ಉಲ್ಲಾಸದಿಂದ ಆಚರಿಸುವ ಜೊತೆಗೆ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಅವರು ಮನವಿ ಮಾಡಿದರು.

ಹೊಸ ವರ್ಷದ ಸಂದರ್ಭದಲ್ಲಿ ಪೊಲೀಸರು ವಿಶೇಷ ನಿಗಾ ವಹಿಸಿ ತಪಾಸಣೆ ಮತ್ತು ಪ್ಯಾಟ್ರೋಲಿಂಗ್ ಕೈಗೊಳ್ಳಲಿದ್ದು, ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸಪಿ ಗಜಾನನ ಸುತಾರ ಎಚ್ಚರಿಸಿದರು. ಸಾರ್ವಜನಿಕರ ಸಹಕಾರದಿಂದಲೇ ಸುರಕ್ಷಿತ ಹಾಗೂ ಶಾಂತಿಯುತ ಹೊಸ ವರ್ಷದ ಸಂಭ್ರಮಾಚರಣೆ ಸಾಧ್ಯ ಎಂದು ಅವರು ಹೇಳಿದರು.



Petkarmedia.com : ಸ್ಥಳೀಯ ಸುದ್ದಿಗಳಿಗಾಗಿ ನೋಡಿ


ಕಾಮೆಂಟ್‌ಗಳು