ಬಾದಾಮಿ ಬನಶಂಕರಿ ಜಾತ್ರಾ ಮಹೋತ್ಸವ: ಜ.3 ರಂದು ಮಹಾರಥೋತ್ಸವ

ಬಾದಾಮಿ: ಉತ್ತರ ಕರ್ನಾಟಕದ ಸುಪ್ರಸಿದ್ಧ ಸುಕ್ಷೇತ್ರ ಶ್ರೀ ಕ್ಷೇತ್ರ ಬನಶಂಕರಿದೇವಿ ದೇವಸ್ಥಾನದಲ್ಲಿ 2026 ನೇ ಸಾಲಿನ ಜಾತ್ರಾಮಹೋತ್ಸವದ ಅಂಗವಾಗಿ ವಿವಿದ ಕಾರ್ಯಕ್ರಮಗಳು ಡಿ.27 ರಿಂದ ಆರಂಭವಾಗಿ ಜ.15 ರ ವರೆಗೆ ನಡೆಯಲಿವೆ.

 

 petkarmedia: ಭಕ್ತರ ಆರಾಧ್ಯ ದೇವತೆ ಬಾದಾಮಿ ಬನಶಂಕರಿ

ಡಿ.27 ರಿಂದ ಜ.2 ರ ವರೆಗೆ ಹೋಮ ಹವನಾದಿಗಳು,ವಾಹನೋತ್ಸವದ ಮತ್ತು ಅಷ್ಠಾವಧಾನ-ಸೇವೆ,  ಜ.2 ರಂದು ಶುಕ್ರವಾರ ಪೌಷ್ಯ ಶುದ್ಧ ಚತುರ್ದಶಿ ಪಲೇದ ಹಬ್ಬ, ಜ.3 ರಂದು ಶನಿವಾರ  ಪೌಷ್ಯ ಶುದ್ಧ  ಪೌರ್ಣಿಮೆ ಸಾಯಂಕಾಲ 5 ಘಂಟೆಗೆ ಮಹಾರಥೋತ್ಸವ  ಜರುಗುವದು. 


 petkarmedia: ಬಾದಾಮಿ ಬನಶಂಕರಿ ದೇವಾಲಯದ ಮುಖ್ಯ ದ್ವಾರ


ಜ.7 ರಂದು ಸಂಜೆ 5 ಗಂಟೆಗೆ ಪೌಷ್ಯ ಕೃಷ್ಣ ಚತುರ್ಥಿ ಕಳಸ  ಇಳಿಯುವದು. ಜ.15 ಪೌಷ್ಯ ಕೃಷ್ಣ ದ್ವಾದಶಿ ಮಕರ ಸಂಕ್ರಮಣ ಕಾರ್ಯಕ್ರಮಗಳು ಜರುಗಲಿವೆ ಎಂದು  ಶ್ರೀ ಬನಶಂಕರಿ ದೇವಸ್ಥಾನದ ಟ್ರಸ್ಟ್  ಕಮೀಟಿ ಚೇರಮನ್‌ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಹೆಚ್ಚಿನ ಸ್ಥಳೀಯ ಸುದ್ದಿಗಳಿಗಾಗಿ Petkarmedia.com ನೋಡಿ.


ಕಾಮೆಂಟ್‌ಗಳು