ಬಾಗಲಕೋಟೆ : ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳಡಿ ದಾಖಲಾದ ಒಟ್ಟು ೧೭೮ ಪ್ರಕರಣಗಳ ಪೈಕಿ ಕಳೆದ ೬ ತಿಂಗಳಲ್ಲಿ ೧೭ ಪ್ರಕರಣಗಳಿಗೆ ಶಿಕ್ಷೆ ಆಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
Petkarmedia:ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆ ನಡೆಯಿತು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ ೨ ವರ್ಷಗಳಲ್ಲಿ ಎಪ್ರೀಲ್ ಮಾಹೆಯಿಂದ ಇಲ್ಲಿವರೆಗೆ ಒಟ್ಟು ೩೩ ಪ್ರಕರಣಗಳು ದಾಖಲಾಗಿದ್ದು, ಹಿಂದಿನ ಬಾಕಿ ೧೪೫ ಸೇರಿ ಒಟ್ಟು ೧೭೮ ಪ್ರಕರಣಗಳ ಪೈಕಿ ೧೭ ಪ್ರಕರಣಗಳಿಗೆ ಶಿಕ್ಷೆಯಾಗಿದೆ. ದೌರ್ಜನ್ಯ ಪ್ರಕರಣಗಳಲ್ಲಿ ತನಿಖೆಯನ್ನು ಜುರುಕುಗೊಳಿಸಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ೪೭ ದೌರ್ಜನ್ಯ ಪ್ರಕರಣಗಳ ಪೈಕಿ ೩೫ ಪ್ರಕರಣಗಳಿಗೆ ಒಟ್ಟು ೫೮.೨೫ ಲಕ್ಷ ರೂ.ಗಳನ್ನು ನೊಂದ ಸಂತ್ರಸ್ಥರಿಗೆ ನೀಡಲಾಗಿದೆ. ಉಳಿದ ೧೨ ಪ್ರಕರಣಗಳಿಗೆ ಪರಿಹಾರಧನ ವಿತರಿಸಲು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಇಂತಹ ಪ್ರಕರಣಗಳನ್ನು ನಡೆಯದಂತೆ ಕ್ರಮವಹಿಸಲು ತಾಲೂಕಾವಾರು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿವುದರ ಜೊತೆಗೆ ಪ್ರತಿ ತಿಂಗಳು ತಾಲೂಕಾವಾರು ಕಡ್ಡಾಯವಾಗಿ ಜಾಗೃತಿ ಸಭೆ ನಡೆಸಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಗ್ರಾಮ ಪಂಚಾಯತಿವಾರು ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕಾಗಿ ಕಾಯ್ದಿರಿಸಿದ ಶೇ.೨೫ ರಷ್ಟು ಅನುದಾನವನ್ನು ನಿಗದಿತ ಅವಧಿಯಲ್ಲಿ ಖರ್ಚು ಭರಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಿಟ್ಟ ಅನುದಾನ ಹಾಗೂ ಶೇ.೨೪.೧೦ ಅನುದಾನದ ಪ್ರಗತಿಯನ್ನು ಪರಿಶೀಲಿಸಿದಾಗ ಪರಿಶಿಷ್ಟ ಜಾತಿ ಅನುದಾನ ಶೇ.೮೯.೩೦, ಪರಿಶಿಷ್ಟ ಪಂಗಡ ವರ್ಗದ ಅನುದಾನ ಶೇ.೮೮.೯೮ ರಷ್ಟು ಖರ್ಚಾಗಿದ್ದು, ಉಳಿದ ಅನುದಾನ ಸಂಪೂರ್ಣವಾಗಿ ಖರ್ಚು ಭರಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯ ವಿವಿಧ ನಿಗಮಗಳಲ್ಲಿ ಬಾಕಿ ಇರುವ ಬೋರವೆಲ್‌ಗಳಿಗೆ ವಿದ್ಯುದ್ದೀಕರಣ ಕಲ್ಪಿಸಲು ಸಂಬAಧಿಸಿದ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಾಲ್ಮೀಕಿ ನಿಗಮದಲ್ಲಿ ಬೋರವೆಲ್ ಕೊರೆಯಲು ೩ ವರ್ಷದಿಂದ ಬಾಕಿ ಉಳಿದಿದ್ದು, ಬೋರವೆಲ್ ಏಜೆನ್ಸಿಯವರಿಗೆ ಡ್ರೀಲ್ ಮಾಡಿದ ಮೊತ್ತ ಪಾವತಿಗೆ ನಿಗದ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿ ಮೂಲಕ ಕರೆ ಮಾಡಿ ಕ್ರಮವಹಿಸಿ ಬೋರವೆಲ್ ಕೊರೆಯಲು ಅನುಕೂಲ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು ಕೇಳಿಕೊಂಡರು.
ದೌರ್ಜನ್ಯ ಕಾಯ್ದೆಗಳ ಕುರಿತು ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಿಗೆ ಒಂದು ಕಾರ್ಯಾಗಾರದ ಅಗತ್ಯವಿದೆ ಎಂದು ಸದಸ್ಯರು ಸಭೆಗೆ ತಿಳಿಸಿದಾಗ ಕಾರ್ಯಾಗಾರ ಆಯೋಜನೆಗೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶ ರಮೇಶ ಚವ್ಹಾಣ ಅವರಿಗೆ ತಿಳಿಸಿದರು.
ಸಭೆಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಡಿವಾಯ್‌ಎಸ್‌ಪಿ ಗಜಾನನ ಸುತಾರ, ಸರಕಾರಿ ಅಭಿಯೋಜಕ ಬಿ.ಡಿ.ಬಾಗವಾನ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಮೇಶ ಚವ್ಹಾಣ ಸೇರಿದಂತೆ ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸದಸ್ಯರಾದ ಯಮನಪ್ಪ ಪೂಜಾರ, ಶಿವಾನಂದ ಮಾದರ, ಫಕೀರಪ್ಪ ಮಾದರ, ಬಸವರಾಜ ಪಾತ್ರೋಟ, ಗೋವಿಂದಪ್ಪ ಕೌಲಗಿ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ