ಗವಿಸಿದ್ದೇಶ್ವರ ಜಾತ್ರೆ: ಮಹಾದಾಸೋಹಕ್ಕೆ ಚಿಕ್ಕ ಓತಗೇರಿಯಿಂದ 1 ಲಕ್ಷ ರವೆ ಉಂಡಿ ಸೇವೆ

ಹುನಗುಂದ:ಪ್ರತಿ ವರ್ಷದಂತೆ ಈ ವರ್ಷವೂ ಮಹಾದಾಸೋಹದ ಮೂಲಕ ಪ್ರಸಿದ್ಧಿ ಪಡೆದಿರುವ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ, ಜಾತ್ರಾ ಮಹಾದಾಸೋಹಕ್ಕೆ ಇಳಕಲ್ಲ ತಾಲ್ಲೂಕಿನ ಚಿಕ್ಕ ಓತಗೇರಿ ಗ್ರಾಮಸ್ಥರು ಒಂದು ಲಕ್ಷ ರವೆ ಉಂಡಿಗಳನ್ನು ಅರ್ಪಿಸಿದ್ದಾರೆ.

Petkarmedia:ಚಿಕ್ಕ ಓತಗೇರಿ ಗ್ರಾಮದಲ್ಲಿ ಮಹಿಳೆಯರು, ಮಕ್ಕಳು ರವೆ ಉಂಡಿ ತಯಾರಿಸಿದರು.

ಚಿಕ್ಕ ಓತಗೇರಿ ಗ್ರಾಮದ ಶ್ರೀ ಗುರು ನಿಶಾನೇಶ್ವರ ಸೇವಾ ಸಮಿತಿಯವರು 25 ಕ್ವಿಂಟಲ್ ರವೆಯನ್ನು ಬಳಸಿಕೊಂಡು ಸುಮಾರು ಒಂದು ಲಕ್ಷ ರವೆ ಉಂಡಿಗಳನ್ನು ಸಿದ್ಧಪಡಿಸಿ ಮಹಾದಾಸೋಹಕ್ಕೆ ನೀಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಜಾತ್ರಾ ಮಹೋತ್ಸವದ ದಾಸೋಹ ಸೇವೆಯಲ್ಲಿ ಗ್ರಾಮಸ್ಥರು ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದಿದ್ದು, ಈ ವರ್ಷವೂ ಅದೇ ಸೇವಾಭಾವ ಮುಂದುವರಿಸಿದ್ದಾರೆ.

ಗ್ರಾಮದ ನಿಶಾನೇಶ್ವರ ದೇವಸ್ಥಾನದಲ್ಲಿ ಮಹಿಳೆಯರು–ಪುರುಷರು ಸೇರಿ 300ಕ್ಕೂ ಹೆಚ್ಚು ಜನರು ಎರಡು ದಿನಗಳ ಕಾಲ ಹಗಲು–ರಾತ್ರಿ ಶ್ರಮಿಸಿ ರವೆ ಉಂಡಿಗಳನ್ನು ತಯಾರಿಸಿದರು. ಸಿದ್ಧವಾದ ಉಂಡಿಗಳನ್ನು ಎರಡು ಟ್ರಾಕ್ಟರ್‌ಗಳಲ್ಲಿ ತರಿಸಿ ಗವಿಸಿದ್ದೇಶ್ವರ ಮಹಾದಾಸೋಹಕ್ಕೆ ಸಮರ್ಪಿಸಲಾಯಿತು.

ಭಕ್ತರ ಸೇವಾಭಾವ ಮತ್ತು ಸಮೂಹ ಶ್ರಮದಿಂದ ರೂಪುಗೊಂಡ ಈ ದಾಸೋಹ, ಜಾತ್ರೆಯ ವೈಭವಕ್ಕೆ ಇನ್ನಷ್ಟು ಕಳೆ ತಂದಿದೆ.



Petkarmedia: ಸ್ಥಳೀಯ ಸುದ್ದಿಗಳಿಗಾಗಿ ನೋಡಿ.


ಕಾಮೆಂಟ್‌ಗಳು