ಜನವರಿ 11ರಂದು ಅಲ್ಲೀಪುರ ತಾತನವರ ಭವ್ಯ ಪುಣ್ಯಸ್ಮರಣೆ

ಬಾಗಲಕೋಟೆ: ಅಲ್ಲೀಪುರ ಶ್ರೀ ಮಹಾದೇವತಾತನವರ ಸದ್ಭಕ್ತ ಮಂಡಳಿ ಹಾಗೂ ಚರಂತಿಮಠ ಶಿವಾನುಭವ ಸಮಿತಿಯಿಂದ ಮಹಾತಪಸ್ವಿ ಲೀಲಾಮೂರುತಿ ಸದ್ಗುರು ಅಲ್ಲೀಪುರ ಮಹಾದೇವತಾತನವರ ೩೮ನೇ ವರ್ಷದ ಪುಣ್ಯಸ್ಮರಣೋತ್ಸವ ಇದೇ ದಿ.೧೧ ರಂದು ಚರಂತಿಮಠದ ಶಿವಾನುಭವ ಮಂಟಪದಲ್ಲಿ ನಡೆಯಲಿದೆ ಎಂದು ಸಿದ್ಧಲಿಂಗಪ್ಪ ಹೊಸಕೇರಿ ಹೇಳಿದರು.

Petkarmedia:ಸಿದ್ಧಲಿಂಗಪ್ಪ ಹೊಸಕೇರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನಗರದ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಅಂದು ಬೆಳಿಗ್ಗೆ ೭ ಗಂಟೆಗೆ ಶ್ರೀ ತಾತನವರ ರಜತಮೂರ್ತಿಗೆ ಮಹಾರುದ್ರಾಭಿಷೇಕ ಜರುಗಲಿದೆ. ಸಾಯಂಕಾಲ ೬ ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ದಿವ್ಯ ಸಾನ್ನಿಧ್ಯವನ್ನು ಚರಂತಿಮಠ ಪ್ರಭು ಸ್ವಾಮೀಜಿ ವಹಿಸುವರು. ಬೀಳಗಿಯ ಕಲ್ಮಠದ ಗುರುಪಾದ ಶಿವಾಚಾರ್ಯರ ಸಮ್ಮುಖದಲ್ಲಿ ಜರುಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಗಣ್ಯ ವ್ಯಾಪಾರಸ್ಥರಾದ ಮಲ್ಲಪ್ಪಣ್ಣ ಆರಬ್ಬಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎ.ಎಸ್.ಪಾವಟೆ,  ನಿವೃತ್ತ ಪ್ರಾಧ್ಯಾಪಕ ಉಮಾಪತಿ ಹಂಪಿಹೊಳಿ, ನಿವೃತ್ತ ಅಭಿಯಂತರ ಶಿವಪುತ್ರಪ್ಪ ಕಿರಗಿ, ವಿಶ್ರಾಂತ ಪ್ರಾಂಶುಪಾಲರಾದ ಜಿ.ಎಸ್.ಬಿಜಾಪೂರ, ಭಕ್ತರಾದ ಶ್ರೀಧರ ಗಡ್ಡಿ ಆಗಮಿಸುವರು ಎಂದು ತಿಳಿಸಿದರು.

ಮಹಾಮಹಿಮರಾದ ಶ್ರೀ ಅಲ್ಲೀಪುರತಾತನವರ ಪುಣ್ಯ ಸ್ಮರಣೋತ್ಸವವು ಈಗಾಗಲೇ ಬಾಗಲಕೋಟೆಯಲ್ಲಿ ೨ ವರ್ಷಗಳ ಮಾಡಲಾಗಿದ್ದು ಈಗ ೩ ವರ್ಷದ ಕಾರ್ಯಕ್ರಮ ನಡೆಸಲಾಗುತ್ತಿದೆ. ನಗರದ ಜನರು, ಭಕ್ತರು ಆಗಮಿಸಿ ಅಲ್ಲೀಪುರ ತಾತನವರ ಆರ್ಶೀವಾದ ಪಡೆಯಬೇಕು ಎಂದು ವಿನಂತಿಸಿಕೊಂಡರು.

ಅಲ್ಲೀಪುರತಾತನವರ ಪುಣ್ಯಸ್ಮರಣೋತ್ಸವವನ್ನು ಬಳ್ಳಾರಿಯ ಜ್ಞಾನ ರಂಭಾಮಠ, ಹಂಪಸಾಗರದ ಉಕ್ಕಿನಮಠ, ಸಾಲು ಮೂರುಹಳ್ಳಿಯಯ ಶಿವಕಂಚಿಮಠ, ಕಾಂತೇಬೇನ್ನೂ ರುಮಠ,, ಕಪಿಲಾ ಸಂಗಮದ ಶಿವಪುರಮಠ, ನಗರೂರುಮಠ, ಅದ್ವಾನಿಮಠ, ನಂದಿಪುರಮಠ ಹೀಗೆ ತಾತನವರ ಒಂಭತ್ತು ಮಠಗಳಲ್ಲಿ ಪ್ರತಿವರ್ಷವೂ ಪುಣ್ಯಸ್ಮರಣೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎ.ಎಸ್.ಪಾವಟೆ, ಪಂಡಿತ ಆರಬ್ಬಿ, ಬಸವರಾಜ ಮುಕ್ಕುಪ್ಪಿ, ಮುರುಗೇಶ ಶಿವನಗುತ್ತಿ, ವಿಶ್ವನಾಥ ವೈಜಾಪೂರ, ಚೆನ್ನವೀರಯ್ಯನವರು ಅಂಬಲಿಕೊಪ್ಪಮಠ ಉಪಸ್ಥಿತರಿದ್ದರು.

ಕಾಮೆಂಟ್‌ಗಳು