ಮುಧೋಳ: ಸಕ್ಕರೆ ಸಾಗಣೆ ಹೆಸರಿನಲ್ಲಿ ಕಂಪನಿಗೆ ಮೋಸ ಮಾಡಿದ ಪ್ರಕರಣವನ್ನು ಭೇದಿಸಿರುವ ಮುಧೋಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ₹11.50 ಲಕ್ಷ ಮೌಲ್ಯದ ನಗದು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಬೆಟ್ಟಜೇವರ್ಗಿ ನಿವಾಸಿ ಮಹೇಶ ಪಾಟೀಲ ಅವರು 2025ರ ನವೆಂಬರ್ 3ರಂದು ನೀಡಿದ ದೂರಿನ ಮೇರೆಗೆ, ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಯಿಂದ ಲಾರಿ ಮೂಲಕ ಗುಜರಾತ್‌ನ ಅಹಮದಾಬಾದ್ ಜಿಲ್ಲೆಯ ಖೇಡಾ ಗ್ರಾಮದ ಕೋಕಾಕೋಲಾ ಕಂಪನಿಗೆ ಕಳುಹಿಸಬೇಕಿದ್ದ 620 ಸಕ್ಕರೆ ಚೀಲಗಳನ್ನು (50 ಕೆ.ಜಿ.) ಮಧ್ಯದಲ್ಲೇ ಮಾರಾಟ ಮಾಡಿ ವಂಚನೆ ನಡೆಸಲಾಗಿದೆ ಎಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಮುಧೋಳ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.317/2025 ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪೊಲೀಸರು ರಚಿಸಿದ ವಿಶೇಷ ತಂಡವು ಜನವರಿ 15ರಂದು ಮುಧೋಳದ ಜೀರಗಳ ಬೈಪಾಸ್ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ವಿಚಾರಣೆಯಲ್ಲಿ, ಆರೋಪಿಗಳು ಸಕ್ಕರೆಯನ್ನು ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ವಿವಿಧ ಪಟ್ಟಣಗಳಲ್ಲಿ ಮಾರಾಟ ಮಾಡಿ ಸುಮಾರು ₹12.50 ಲಕ್ಷ ನಗದು ಸಂಗ್ರಹಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಆ ಹಣದಲ್ಲಿ ₹2.50 ಲಕ್ಷ ನೀಡಿ ಕಾರು ಖರೀದಿಸಿ, ಉಳಿದ ಹಣವನ್ನು ಖರ್ಚು ಮಾಡಿರುವುದಾಗಿ ತಿಳಿದುಬಂದಿದೆ.
ಆರೋಪಿಗಳಿಂದ ₹9 ಲಕ್ಷ ನಗದು ಹಾಗೂ ಸಕ್ಕರೆ ಮಾರಾಟದ ಹಣದಿಂದ ಖರೀದಿಸಿದ ಕಾರನ್ನು (ಅಂದಾಜು ಮೌಲ್ಯ ₹2.50 ಲಕ್ಷ) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಯೋಗ್ಯ ಬಹುಮಾನ ಘೋಷಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.
#MudholPolice#ಮುದೋಳಪೊಲೀಸ್#PoliceAction#SugarFraud#ವಂಚನೆ#CrimeNews#BagalkotNews#KarnatakaPolice#PoliceSuccess#SeizedCash#CrimeUpdate#KannadaNews#LocalNews#BreakingNews

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ