ರಬಕವಿ–ಬನಹಟ್ಟಿ:₹16 ಲಕ್ಷ ಬೆಳ್ಳಿ ಬಾಗಿಲು, 11 ಎಕರೆ ಆಸ್ತಿ ವಿವಾದ: ಜಗದಾಳ ಬಳಿ ಅಜ್ಜಿ ಕೊಲೆ – ಕಾಲುವೆಗೆ ನೂಕಿ ಬದುಕಿಸುವ ನಾಟಕ
ಬಾಗಲಕೋಟೆಜಿಲ್ಲೆಯ ತಾಲ್ಲೂಕಿನ ಜಗದಾಳ ಗ್ರಾಮದ ಬಳಿ ೮೦ ವರ್ಷದ ವೃದ್ಧೆ ಚಂದ್ರವ್ವ ನಿಲಜಗಿ ಅವರನ್ನು ಆಸ್ತಿ ವಿವಾದದ ಹಿನ್ನೆಲೆ ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಭುಲಿಂಗ ದೇವರಿಗೆ ಸುಮಾರು ₹೧೬ ಲಕ್ಷ ಮೌಲ್ಯದ ಬೆಳ್ಳಿ ಬಾಗಿಲು ಮಾಡಿಸಿದ್ದ ಚಂದ್ರವ್ವ ಅವರ ಮೇಲೆ ಆಸ್ತಿ ಕಬಳಿಸುವ ಉದ್ದೇಶದಿಂದಲೇ ಅಜ್ಜಿಯ ಅಣ್ಣನ ಮಕ್ಕಳು ದಾಳಿ ನಡೆಸಿ, ಜಗದಾಳ ಸಮೀಪದ ಘಟಪ್ರಭಾ ಕಾಲುವೆಗೆ ನೂಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯ ನಂತರ ಆರೋಪಿತರು ಬದುಕಿಸುವ ನಾಟಕವಾಡಿ, ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದಂತೆ ನಾಟಕವಾಡಿದ್ದು, ಅವಸರದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಶವದ ಎದುರು ಸಂಬಂಧಿಕರು ಕಣ್ಣೀರು ಹಾಕುತ್ತಾ ನಾಟಕವಾಡಿದ್ದರಿಂದ ಸ್ಥಳೀಯರಲ್ಲಿ ಅನುಮಾನ ಹುಟ್ಟಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಕೊಲೆಯ ಅಸಲಿ ಕಥೆ ಬಯಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ಮೃತ ಚಂದ್ರವ್ವ ಹಾಗೂ ಅವರ ಅಣ್ಣನ ಮಕ್ಕಳ ನಡುವೆ ಸುಮಾರು ೧೧ ಎಕರೆ ಭೂಮಿಗೆ ಸಂಬಂಧಿಸಿದ ವಿವಾದ ಇತ್ತು ಎನ್ನಲಾಗಿದೆ. ಜನವರಿ ೧೩ರಂದು ಸರ್ವೆ ಅಧಿಕಾರಿಗಳು ಜಮೀನು ಸರ್ವೆಗಾಗಿ ಬಂದಿದ್ದ ವೇಳೆ ಹೊಲದ ಬಳಿಯೇ ಇರುವ ಕಾಲುವೆಗೆ ಚಂದ್ರವ್ವ ಅವರನ್ನು ನೂಕಿ, ನಂತರ ಬದುಕಿಸಿದಂತೆ ತೋರಿಸಲು ನಾಟಕವಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ಸಂಬಂಧ ಬನಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದಾರೆ. ತನಿಖೆ ಮುಂದುವರಿದಿದೆ.
Bagalkot Murder News,jagadal Murder Case,Property Dispute Murder Karnataka,Old Woman Murder Bagalkot,Rabkavi Banahatti Crime News,Ghataprabha Canal Murder,Banahatti Police Investigation
#BagalkotBreaking,#JagadalMurder#PropertyDispute#OldWomanMurder#GhataprabhaCanal#RabkaviBanahatti#KarnatakaCrime,SilverDoorCase#BreakingNewsKannada#BanahattiPolice

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ