ಬಾದಾಮಿ:ಚಾಲುಕ್ಯ ಉತ್ಸವ-2026ರ ಅಂಗವಾಗಿ ಜನವರಿ 18 ರಂದು ಬೆಳಿಗ್ಗೆ 7 ಗಂಟೆಗೆ ಹಮ್ಮಿಕೊಂಡ ಚಾಲುಕ್ಯ ನಡಿಗೆ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಬುಧವಾರ ಬಿಡುಗಡೆಗೊಳಿಸಿದರು.
Petkarmedia:ಚಾಲುಕ್ಯ ನಡಿಗೆ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಬುಧವಾರ ಬಿಡುಗಡೆಗೊಳಿಸಿದರು.
ಚಾಲುಕ್ಯ ನಡಿಗೆ ಸ್ಮಾರಕದ ಕಡೆಗೆ ಕಾರ್ಯಕ್ರಮಕ್ಕೆ ಟೀ ಶರ್ಟಗಳನ್ನು ರಾಜ್ಯ ಸರಕಾರಿ ನೌಕರರ ಸಂಘದ ಬಾದಾಮಿ ತಾಲೂಕಾ ಘಟಕ ಹಾಗೂ ಭಾರತೀಯ ವೈದ್ಯಕೀಯ ಸಂಘದ ತಾಲೂಕಾ ಘಟಕ ಇವರುಗಳ ಜಂಟಿಯಾಗಿ ನೀಡಿದರು. ಇದರ ಜೊತೆಗೆ ಕಾರ್ಯಕ್ರಮದ ಪೊಸ್ಟರಗಳನ್ನು ಸಹ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಹಶೀಲದಾರ ಎಸ್.ಬಿ.ಬೊಮ್ಮನ್ನವರ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಸತೀಶ ಮಾಕೊಂಡ, ಮಲ್ಲಿಕಾರ್ಜುನ ಬಡಿಗೇರ, ತಾಲೂಕಾ ನೌಕರರ ಸಂಘದ ಅಧ್ಯಕ್ಷ ಡಾ.ಎಂ.ಎನ್.ಸಿದ್ದಲಿಂಗಪ್ಪನ್ನವರ, ತಾಲೂಕಾ ಆರೋಗ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ, ಘಟಕ ವ್ಯವಸ್ಥಾಪಕ ಅಶೋಕ ಕೋರಿ, ನಿವೃತ್ತ ಪ್ರಾಚಾರ್ಯ ಆರ್.ಬಿ.ಸಂಕದಾಳ, ಹನಮಂತ ಅಪ್ಪನ್ನವರ ಸೇರಿದಂತೆ ಬಾದಾಮಿ ತಾಲೂಕಾ ಆಡಳಿತದ ಎಲ್ಲ ಸರಕಾರಿ ನೌಕರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ