ಬಾಗಲಕೋಟೆ:ಬಾಗಲಕೋಟೆ ಜಿಲ್ಲೆಯ ಕಮತಗಿ ಪಟ್ಟಣದ ಹಿರಿಯ ಪತ್ರಕರ್ತ ಪ್ರಕಾಶ ಗುಳೇದಗುಡ್ಡ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹2 ಲಕ್ಷ ಪರಿಹಾರ ನೀಡಲಾಗಿದೆ.
ಬಾಗಲಕೋಟೆ ಮತಕ್ಷೇತ್ರದ ಶಾಸಕ ಎಚ್.ವೈ. ಮೇಟಿ ಅವರ ಮನವಿಯ ಮೇರೆಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರ ಮಂಜೂರು ಮಾಡಿದ್ದರು. ಜ.20 ರಂದು ಈ ಹಣ ಬಾಗಲಕೋಟೆ ಜಿಲ್ಲಾಧಿಕಾರಿಗಳ ಖಾತೆಗೆ ಜಮೆ ಆಗಿದ್ದು, ಜ.23 ರಂದು ಜಿಲ್ಲಾಧಿಕಾರಿ ಸಂಗಪ್ಪ ಅವರು ತಮ್ಮ ಕಚೇರಿಗೆ ಮೃತರ ಪತ್ನಿ ಮಂಜುಳಾ ಗುಳೇದಗುಡ್ಡ, ಪುತ್ರ ಶ್ರೀಶೈ ಹಾಗೂ ಪುತ್ರಿ ಸ್ಫೂರ್ತಿ ಅವರನ್ನು ಕರೆಸಿ ₹2 ಲಕ್ಷದ ಚೆಕ್ ವಿತರಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಕುಟುಂಬಕ್ಕೆ ಧೈರ್ಯ ತುಂಬಿ, ಮಕ್ಕಳ ಶಿಕ್ಷಣಕ್ಕೆ ಯಾವುದೇ ಸೌಲಭ್ಯ ಅಗತ್ಯವಿದ್ದರೆ ನೇರವಾಗಿ ಸಂಪರ್ಕಿಸುವಂತೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಕಸ್ತೂರಿ ಪಾಟೀಲ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ ಅಂಗಡಿ, ಪ್ರಧಾನ ಕಾರ್ಯದರ್ಶಿ ಜಗದೀಶ ಗಾಣಿಗೇರ, ಪತ್ರಕರ್ತರು ಶ್ರೀಶೈಲ ಬಿರಾದಾರ, ಸಂತೋಷ ಹೊದ್ದೂರ, ಅಭಯ ಮನಗೂಳಿ, ವಿರೇಶ ನಾಲತ್ತವಾಡ, ಸಂತೋಷ ಮುಧೋಳೆ, ಅನಿರುದ್ಧ ಗಲಗಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
👉 ಸ್ಥಳೀಯ ಸುದ್ದಿಗಳಿಗಾಗಿ Petkarmedia ಫಾಲೋ ಮಾಡಿ
"ಕರ್ತವ್ಯನಿಷ್ಠ ಪತ್ರಕರ್ತನ ಕುಟುಂಬಕ್ಕೆ ಸರ್ಕಾರದ ಸ್ಪಂದನೆ" — ಮಾನವೀಯತೆಯ ಗೆಲುವು!
#BagalkotNews #JournalistSupport #CMReliefFund #PrakashGuledagudda #Kamatagi #Siddaramaiah #HYMeti #Petkarmedia

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ