ಹುನಗುಂದ: ಕಬ್ಬು ಕಟಾವು ಯಂತ್ರಕ್ಕೆ ಬೆಂಕಿ: 20 ಎಕರೆ ಕಬ್ಬು ಭಸ್ಮ, ಲಕ್ಷಾಂತರ ರೂ. ನಷ್ಟ

ಹುನಗುಂದ:ತಾಲೂಕಿನ ಘಟ್ಟಿಗನೂರ ಗ್ರಾಮದಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ಎಂಜಿನ್ ಯಂತ್ರದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಭಾರೀ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. 

petkarmedia:ಎಂಜಿನ್‌ಗೆ ಹೊತ್ತಿಕೊಂಡ ಬೆಂಕಿ ಕ್ಷಣಗಳಲ್ಲಿ ಕಬ್ಬಿನ ಹೊಲಕ್ಕೂ ವ್ಯಾಪಿಸಿದ ಸ್ಥಿತಿ.

ಎಂಜಿನ್‌ಗೆ ಹೊತ್ತಿಕೊಂಡ ಬೆಂಕಿ ಕ್ಷಣಗಳಲ್ಲಿ ಕಬ್ಬಿನ ಹೊಲಕ್ಕೂ ವ್ಯಾಪಿಸಿ ಸುಮಾರು 20 ಎಕರೆಯಷ್ಟು ಕಬ್ಬು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಈ ದುರ್ಘಟನೆಯಲ್ಲಿ ಶಿವನಗೌಡ ಪಾಟೀಲ್, ಈರಮ್ಮ ಅಗಸಿಮುಂದಿನ, ವೆಂಕನಗೌಡ ಹಾಗೂ ಮಂಜುನಾಥ ವಂದಾಲಿ ಅವರಿಗೆ ಸೇರಿದ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಹುನಗುಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶ್ರಮಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದು, ಇನ್ನಷ್ಟು ಹೊಲಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ.

ಘಟನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

🏷️ #Hungund #Ghataginur #SugarcaneFire #FireAccident #FarmersLoss #KarnatakaNews #Petkarmedia #BreakingNews #AgricultureNews #Bagalkot

ಕಾಮೆಂಟ್‌ಗಳು