ಬಾಗಲಕೋಟೆ: ವಿಜಯಪುರ ಜಿಲ್ಲೆಯ ಕೂಡಗಿಯ ಬಾಲಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಅಂತರ ಶಾಲಾ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ “ಝೀಸ್ಥಾಲಾನ್–2025” ನಲ್ಲಿ ಬಾಗಲಕೋಟೆಯ ರಂಗನಾಥ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
Petkarmedia: ಬಾಗಲಕೋಟೆಯ ರಂಗನಾಥ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು .
ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಒಟ್ಟು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. 100 ಮೀಟರ್ ಹಾಗೂ 200 ಮೀಟರ್ ಓಟ, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಚೆಸ್, ಮೀಮ್ ಕ್ರಿಯೇಷನ್, ಭಗವದ್ಗೀತಾ ಶ್ಲೋಕ ಪಠಣ ಹಾಗೂ ಸ್ಮಾರ್ಟ್ ಸ್ಕ್ರೀನ್ ಸ್ಟೋರಿಟೆಲ್ಲಿಂಗ್ ಮುಂತಾದ ಹಲವು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮೀಮ್ ಕ್ರಿಯೇಷನ್, ಸ್ಮಾರ್ಟ್ ಸ್ಕ್ರೀನ್ ಸ್ಟೋರಿಟೆಲ್ಲಿಂಗ್ ಹಾಗೂ ಟೇಬಲ್ ಟೆನಿಸ್ ವಿಭಾಗಗಳಲ್ಲಿ ರಂಗನಾಥ ಶಾಲೆಯ ವಿದ್ಯಾರ್ಥಿಗಳು ತೃತೀಯ ಬಹುಮಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಕಾರ್ಯದರ್ಶಿ ರುಕ್ಲಾಸಾ ಕಾವಡೆ, ಪ್ರಾಂಶುಪಾಲ ವಿಕ್ರಮ್ ನಾರ್ವೇಕರ್, ಬೆಂಗಳೂರಿನ ಸೃಜನಶೀಲ ಅಧ್ಯಾಪನ ಕೇಂದ್ರದ ಹಿರಿಯ ತರಬೇತುದಾರ ತ್ರಿವೇಣಿ ಮುರಳಿಧರ, ಉಪ ಪ್ರಾಂಶುಪಾಲೆ ವಸುಧಾ ನಾರ್ವೇಕರ್ ಹಾಗೂ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರಕಾಶ ವೆಂಕಣ್ಣವರ ಸೇರಿದಂತೆ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
#Zeesthalan2025 #RanganathInternationalSchool#Bagalkot#SchoolSports#StudentAchievement#InterSchoolCompetition#EducationNews#Petkarmedia

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ