ಬಾಗಲಕೋಟೆ:ಚಾಲುಕ್ಯ ಉತ್ಸವ–2026: ಚಾಲುಕ್ಯ ರಥಯಾತ್ರೆಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಚಾಲನೆ

ಬಾಗಲಕೋಟೆ, ಜ.17: ಚಾಲುಕ್ಯರ ಗತವೈಭವವನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಚಾಲುಕ್ಯ ಉತ್ಸವ–2026ರ ಅಂಗವಾದ ಚಾಲುಕ್ಯ ರಥಯಾತ್ರೆಗೆ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಶನಿವಾರ ಚಾಲನೆ ನೀಡಿದರು.

Petkarmedia: ಚಾಲುಕ್ಯ ಉತ್ಸವ–2026: ಚಾಲುಕ್ಯ ರಥಯಾತ್ರೆಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಚಾಲನೆ

ಜಿಲ್ಲಾಡಳಿತ ಭವನದ ಆವರಣದಲ್ಲಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜನವರಿ 19, 20 ಹಾಗೂ 21ರಂದು ಬಾದಾಮಿ, ಪಟ್ಟದಕಲ್ಲ ಮತ್ತು ಐಹೊಳೆಗಳಲ್ಲಿ ಚಾಲುಕ್ಯ ಉತ್ಸವ ಜರುಗಲಿದೆ ಎಂದು ತಿಳಿಸಿದರು.

ಚಾಲುಕ್ಯ ರಥವು ಜಿಲ್ಲಾಡಳಿತ ಭವನದಿಂದ ಆರಂಭವಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಜನವರಿ 19ರಂದು ಬಾದಾಮಿಗೆ ಆಗಮಿಸಿ ಉತ್ಸವದ ಅದ್ದೂರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ. ಜನವರಿ 20ರಂದು ಪರ್ವ, ಹಳದೂರ, ಲಾಯದಗುಂದಿ, ನಾಗರಾಳ ಎಸ್.ಪಿ., ಹಂಸನೂರ, ಹಾನಾಪೂರ ಎಸ್.ಪಿ., ಮಂಗಳಗುಡ್ಡ ಮೂಲಕ ಪಟ್ಟದಕಲ್ಲಿಗೆ ತಲುಪಲಿದೆ. ನಂತರ ಹುನಗುಂದ, ಇಲಕಲ್ಲ, ಗೊರಬಾಳ, ಅಮರಾವತಿ, ರಕ್ಕಸಗಿ, ಅಮೀನಗಡ, ಕಮತಗಿ, ಹೂವಿನಹಳ್ಳಿ ಮಾರ್ಗವಾಗಿ ಐಹೊಳೆ ಗ್ರಾಮಕ್ಕೆ ಆಗಮಿಸಲಿದೆ.

ರಥಯಾತ್ರೆ ಗ್ರಾಮಗಳಿಗೆ ಆಗಮಿಸುವ ಸಂದರ್ಭಗಳಲ್ಲಿ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿ ಬೀಳ್ಕೊಡುವಂತೆ ಶಾಸಕರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿ.ಪಂ. ಉಪಕಾರ್ಯದರ್ಶಿ ಎನ್.ವಾಯ್. ಬಸರಿಗಿಡದ ಅವರು ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು.

#ChalukyaUtsava2026 #ChalukyaRathayatra #BagalkotNews #Badami #Pattadakal #Aihole #HeritageOfKarnataka #KarnatakaCulture #BagalkotDistrict

ಕಾಮೆಂಟ್‌ಗಳು