ಬಾಗಲಕೋಟೆ: ವೈಭವದ ಬಿಪ್ಸ್ ಶಾಲೆ ವಾರ್ಷಿಕೋತ್ಸವ ‘ಸ್ಪಾಟ್ಲೈಟ್–2026’'

ಬಾಗಲಕೋಟೆ: ಬಸವೇಶ್ವರ ಸಿಬಿಎಸ್‌ಇ (ಬಿಪ್ಸ್) ಶಾಲೆಯ ಎರಡು ದಿನಗಳ ವಾರ್ಷಿಕೋತ್ಸವ ‘ಸ್ಪಾಟ್ ಲೈಟ್–2026’ ವಿದ್ಯಾಗಿರಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ನೂತನ ಸಭಾಭವನದಲ್ಲಿ ಅದ್ದೂರಿಯಾಗಿ ನಡೆಯಿತು.

Petkarmedia:ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಲಾಯಿತು.
 

ಈ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಘೊಯಲ್, ಮಕ್ಕಳಲ್ಲಿ ಸ್ವತಂತ್ರ ಆಲೋಚನೆ ಮತ್ತು ನಿರ್ಧಾರ ಸಾಮರ್ಥ್ಯ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.

ಯುಕೆಪಿ ಉಪಮುಖ್ಯಾಧಿಕಾರಿ ಮಹಾದೇವ ಮುರಗಿ ವಾರ್ಷಿಕೋತ್ಸವವು ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆ ಎಂದರು. ಅಧ್ಯಕ್ಷತೆ ವಹಿಸಿದ್ದ ಬಿ.ವಿ.ವಿ. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಸಾಂಸ್ಕೃತಿಕ ನೃತ್ಯ, ನಾಟಕ, ಮೈಮ್ ಶೋ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೆಳೆದವು. ಶೈಕ್ಷಣಿಕ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


#ಬಿಪ್ಸ್_ಶಾಲೆ#SpotLight2026#ವಾರ್ಷಿಕೋತ್ಸವ#ಬಾಗಲಕೋಟೆ#ಶಾಲಾ_ಸಾಂಸ್ಕೃತಿಕ#ಮಕ್ಕಳ_ಪ್ರತಿಭೆ#CBSESchool

ಕಾಮೆಂಟ್‌ಗಳು