ಬಾಗಲಕೋಟ:ಹೆಡ್ಲೈನ್ ಬಾಗಲಕೋಟೆ ಉಪಚುನಾವಣೆ 2026: ಬಿಜೆಪಿಯಿಂದ ಪೂರ್ವಭಾವಿ ಸಭೆ

ಬಾಗಲಕೋಟೆ: ವಿಧಾನಸಭಾ ಕ್ಷೇತ್ರದ ಮುಂಬರುವ ಉಪಚುನಾವಣೆಯ ಹಿನ್ನೆಲೆಯಲ್ಲಿ ವಿಜಯ ಸಂಕಲ್ಪದೊಂದಿಗೆ ಬಿಜೆಪಿ ರಣತಂತ್ರ ಆರಂಭಿಸಿದ್ದು, ಈ ನಿಟ್ಟಿನಲ್ಲಿ ಸೋಮವಾರ ದು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬಾಗಲಕೋಟೆ ನಗರ ಮಂಡಲ ಹಾಗೂ ಗ್ರಾಮಾಂತರ ಮಂಡಲದ ಪದಾಧಿಕಾರಿಗಳ ಮಹತ್ವದ ಪೂರ್ವಭಾವಿ ವಿಶೇಷ ಸಭೆ ಯಶಸ್ವಿಯಾಗಿ ನಡೆಯಿತು.

Petkarmedia:ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪದಾಧಿಕಾರಿಗಳ ಮಹತ್ವದ ಸಭೆ ನಡೆಯಿತು .

 ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ಶಾಂತಗೌಡ ಪಾಟೀಲ, ಸಂಸದರಾದ ಶ್ರೀ ಪಿ.ಸಿ. ಗದ್ದಿಗೌಡರ, ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣಸಾ ಭಾಂಡಗೆ, ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುರುಗೇಶ ನಿರಾಣಿ, ಶಾಸಕರಾದ ಶ್ರೀ ಜಗದೀಶ ಗುಡಗುಂಟಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಹಣಮಂತ ನಿರಾಣಿ, ಮಾಜಿ ಶಾಸಕರಾದ ಶ್ರೀ ವೀರಣ್ಣ ಚರಂತಿಮಠ, ಶ್ರೀ ದೊಡ್ಡನಗೌಡ ಪಾಟೀಲ, ಶ್ರೀ ರಾಜಶೇಖರ್ ಶೀಲವಂತ, ಶ್ರೀ ಜಿ.ಎಸ್. ನ್ಯಾಮಗೌಡ, ಅರುಣ ಶಾಹಾಪುರ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗಾಗಿ ಕಾರ್ಯಕರ್ತರು ಸಂಘಟಿತವಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಸಭೆಯಲ್ಲಿ ಒತ್ತಿ ಹೇಳಲಾಯಿತು. ಪಕ್ಷದ ಕಾರ್ಯಕರ್ತರ ಉತ್ಸಾಹ ಮತ್ತು ಸಂಘಟಿತ ಹೋರಾಟವೇ ಬಿಜೆಪಿಯ ಯಶಸ್ಸಿನ ಗುಟ್ಟು ಎಂದು ಸಂಸದ ಗೋವಿಂದ ಕಾರಜೋಳ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 


#ಬಾಗಲಕೋಟೆ_ಉಪಚುನಾವಣೆ2026

#BagalkoteByElection

#BJPBagalkote

#ವಿಜಯ_ಸಂಕಲ್ಪ

#BJPKarnataka

#ಬಾಗಲಕೋಟೆ

#BJPMeeting

#ರಾಜಕೀಯ_ಸುದ್ದಿ

#KarnatakaPolitics

#ಸಂಘಟಿತ_ಕಾರ್ಯಕರ್ತರು

#VijayaSankalpa

#BagalkotePolitics

#ಬಿಜೆಪಿ

ಕಾಮೆಂಟ್‌ಗಳು