ಬಾಗಲಕೋಟೆ:ಜ. 30ಕ್ಕೆ ‘ಹೌದ್ರೊ ಹುಲಿಯ’ ಬಿಡುಗಡೆ – ಉತ್ತರ ಕರ್ನಾಟಕದ ಜವಾರಿ ಹಾಸ್ಯದ ಸೊಗಡು

ಬಾಗಲಕೋಟೆ:ಕನ್ನಡ ಸಿನಿರಸಿಕರ ಮನಗೆದ್ದ ‘ಅಪ್ಪೆ ಟೀಚರ್’, ‘ಲವ್ ಕಾಕ್ಟೇಲ್’, ‘ಮಾಲ್ಗುಡಿ ಡೇಸ್’ ಚಿತ್ರಗಳ ಯಶಸ್ಸಿನ ನಂತರ, ಸ್ವಯಂ ಪ್ರಭಾ ಎಂಟರ್‌ಟೈನ್‌ಮೆಂಟ್ ಅಂಡ್ ಪ್ರೊಡಕ್ಷನ್ಸ್‌ನಿಂದ ಮತ್ತೊಂದು ವಿಭಿನ್ನ ಹಾಗೂ ಸಂಪೂರ್ಣ ಮನೋರಂಜನಾ ಚಿತ್ರ ‘ಹೌದ್ರೂ ಹುಲಿಯ’ ಜನವರಿ 30ರಂದು ತೆರೆಗೆ ಬರಲು ಸಜ್ಜಾಗಿದೆ ಎಂದು ಯುವ ನಿರ್ದೇಶಕ ಅನೀಶ್ ಪೂಜಾರಿ ತಿಳಿಸಿದ್ದಾರೆ.


ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಚಿತ್ರವು ಸಂಪೂರ್ಣ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿದ್ದು, ಗ್ರಾಮೀಣ ಬದುಕಿನ ಸೊಗಡು, ಹಾಸ್ಯ, ಭಾವನೆ ಮತ್ತು ಸಮಾಜದ ನೈಜ ಮುಖವನ್ನು ಕಥಾವಸ್ತುವಾಗಿ ಹೊಂದಿದೆ ಎಂದರು.

ಈಗಾಗಲೇ ಡಾ. ಶಿವರಾಜ್ ಕುಮಾರ್ ಅವರು ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಚಿತ್ರದ “ಲಚ್ಚಿ ಮಿಕ್ಕಿ ಮಿಕ್ಕಿ ಅಂತ ನನ್ನ ನೋಡುತಾಳ” ಎಂಬ ಹಾಡು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಕಾಮಿಡಿ ಕಿಲಾಡಿ ಖ್ಯಾತಿಯ ಜಿ.ಜಿ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದು, ‘ದಸ್ಯತ್’ ಚಿತ್ರದ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ.

ಕೆ. ರತ್ನಾಕರ ಕಾಮತ್ ಹಾಗೂ ಗಣೇಶ್ ಆರ್. ಕಾಮತ್ ನಿರ್ಮಾಣದಲ್ಲಿ ಚಿತ್ರ ನಿರ್ಮಾಣಗೊಂಡಿದೆ.

ಸಂತೋಷ್ ಗುಂಪಲಾಜೆ ಮತ್ತು ದೀಕ್ಷಿತ್ ಧರ್ಮಸ್ಥಳ ಛಾಯಾಗ್ರಹಣ, ಕಿಶೋರ್ ಶೆಟ್ಟಿ ಸಂಗೀತ ನೀಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಸೌಮ್ಯ ಡಿ. ಗೌಡ ಹಾಗೂ ಕ್ರಿಯೇಟಿವ್ ಹೆಡ್ ಆಗಿ ಸ್ಮಿತೇಶ್ ಎಸ್. ಬಾರ್ಯ ಕಾರ್ಯನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಬಿರಾದರ್, ಮಿಮಿಕ್ರಿ ಗೋಪಿ, ಪ್ರಿಯಾ ಸವದಿ, ಸೂರಜ್, ಮಲ್ಯಾ ಬಾಗಲಕೋಟೆ, ಸಂತೋಷ್ ರೋಣ, ಕಾಮಿಡಿ ಕಿಲಾಡಿ ಖ್ಯಾತಿಯ ಜಿ.ಜಿ, ಉಮೇಶ್ ಕಿನ್ನಾಳ್, ದಾನಪ್ಪ, ಸದಾನಂದ ಸೇರಿದಂತೆ ಹಲವರು ನಟಿಸಿದ್ದಾರೆ.

ಸಂಪೂರ್ಣ ಹಾಸ್ಯಮಯ ಕಥಾಹಂದರ, ನೈಜ ಸಂಭಾಷಣೆಗಳು ಹಾಗೂ ದೃಶ್ಯ ವೈಭವದಿಂದ ಕೂಡಿರುವ ಈ ಚಿತ್ರವು ಎಲ್ಲ ವರ್ಗದ ಪ್ರೇಕ್ಷಕರಿಗೂ ಸಂಪರ್ಕ ಸಾಧಿಸಲಿದೆ ಎಂಬ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.

‘ಹೌದ್ರೂ ಹುಲಿಯ’ ಚಿತ್ರವನ್ನು ಕುಟುಂಬ ಸಮೇತರಾಗಿ ವೀಕ್ಷಿಸಬಹುದಾಗಿದ್ದು, ಜನವರಿ 30ರಂದು ಥಿಯೇಟರ್ ಹಾಗೂ ಒಟಿಟಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

ಸುದ್ದಿಗೋಷ್ಠಿಯಲ್ಲಿ ಹಾಸ್ಯನಟ ಮಲ್ಯಾ ಬಾಗಲಕೋಟೆ, ನಟಿ ಪ್ರಿಯಾ ಸವದಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

📰 ಸ್ಥಳೀಯ ಸುದ್ದಿ, ಸಿನೆ ಅಪ್‌ಡೇಟ್‌ಗಳಿಗಾಗಿ Petkarmedia ಅನ್ನು ಫಾಲೋ ಮಾಡಿ

🔖 

#ಹೌದ್ರೂಹುಲಿಯ

#KannadaCinema

#NorthKarnataka

#JavariLanguage

#ComedyMovie

#OTTRelease

#TheatreRelease

#Petkarmedia

ಕಾಮೆಂಟ್‌ಗಳು