ಧಾರವಾಡ:ಹುಬ್ಬಳ್ಳಿ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ (ಜ.17) India Post Payments Bank (ಐಪಿಪಿಬಿ) ಹಾಗೂ Bajaj General Insurance ಸಹಭಾಗಿತ್ವದಲ್ಲಿ ಅಪಘಾತ ವಿಮಾ ಚೆಕ್ ವಿತರಣಾ ಕಾರ್ಯಕ್ರಮ ಜರುಗಿತು.
ದುರದೃಷ್ಟವಶಾತ್ ಕಳೆದ ತಿಂಗಳು ಅಪಘಾತದಲ್ಲಿ ನಿಧನರಾದ ದಿ. ಮಲ್ಲಿಕಾರ್ಜುನ ಮೆಣಸಿನಕಾಯಿ ಅವರು ಅಂಚೆ ಇಲಾಖೆಯಲ್ಲಿ ಕೇವಲ ರೂ.557ಕ್ಕೆ ಅಪಘಾತ ವಿಮೆ ಪಡೆದಿದ್ದರು. ಅವರ ನಿಧನಾನಂತರ ನಾಮಿನಿಯಾದ ಪವಿತ್ರಾ ಮಲ್ಲಿಕಾರ್ಜುನ ಮೆಣಸಿನಕಾಯಿ ಅವರಿಗೆ ರೂ.10 ಲಕ್ಷದ ಪರಿಹಾರ ಚೆಕ್ ವಿತರಿಸಲಾಯಿತು. ವಿಜಯನಗರ ಸಬ್‌ಆಫೀಸ್‌ನ ಪೋಸ್ಟ್‌ವಿಮೆನ್ ಸಿದ್ದಮ್ಮ ಹೆಬಸೂರ್ ಅವರು ಈ ಅಪಘಾತ ವಿಮೆಯನ್ನು ನೀಡಿದ್ದರು.
ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಪ್ರಾದೇಶಿಕ ಮುಖ್ಯಸ್ಥ ಜಗದೀಶ್ ಚಿಕ್ಕನರಗುಂದ, ಹುಬ್ಬಳ್ಳಿ ಹೆಡ್ ಪೋಸ್ಟ್ ಮಾಸ್ಟರ್ ಮಧು ಸಾಗರ್, ಹುಬ್ಬಳ್ಳಿ ಪೂರ್ವ ವಲಯದ ಉಪ ವಿಭಾಗದ ಮುಖ್ಯಸ್ಥ ವಿವೇಕ್ ನಿಂಬರಗಿ ಹಾಗೂ ಧಾರವಾಡ ಐಪಿಪಿಬಿ ಮ್ಯಾನೇಜರ್ ಶಿವಯೋಗಿ ಉಪಸ್ಥಿತರಿದ್ದರು.
#ಅಂಚೆಇಲಾಖೆ #ಅಪಘಾತವಿಮೆ #IPPB #BajajGeneralInsurance #Hubballi #Dharwad #InsuranceBenefit

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ