ಬಾಗಲಕೋಟೆ:ಯುಗಪುರುಷ ಲಿಂಗೈಕ್ಯ ಶ್ರೀ ಕುಮಾರಸ್ವಾಮಿಗಳ 159ನೇ ಜಯಂತಿ, ಟೀಕಿನಮಠದ ಶತಾಯುಷಿ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ರಜತ ಪುಣ್ಯಸ್ಮರಣೆ, ಲಿಂಗೈಕ್ಯ ಶ್ರೀ ರೇವಣಸಿದ್ದ ಮಹಾಸ್ವಾಮಿಗಳ ದಶಮ ಪುಣ್ಯಸ್ಮರಣೆ ಹಾಗೂ ಶ್ರೀ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಸಮಾರಂಭವನ್ನು ಫೆಬ್ರುವರಿ 6, 7 ಮತ್ತು 8ರಂದು ಒಟ್ಟಿಗೆ ಹಮ್ಮಿಕೊಳ್ಳಲಾಗಿದೆ ಎಂದು ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ತಿಳಿಸಿದ್ದಾರೆ.
Petkarmedia:ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ಮಾತನಾಡಿದರು.
ನಗರದ ಟೀಕಿನಮಠದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಫೆಬ್ರುವರಿ 8ರಂದು ನಿರಂಜನ ಪಟ್ಟಾಧಿಕಾರ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು. ಮಹೋತ್ಸವದ ಅಂಗವಾಗಿ ಜನವರಿ 16ರಿಂದ ಫೆಬ್ರುವರಿ 5ರವರೆಗೆ 21 ದಿನಗಳ ಕಾಲ ಚರಂತಿಮಠದ ಶಿವಾನಂದ ಮಂಟಪದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ಹಾನಗಲ್ ಕುಮಾರೇಶ್ವರ ಸ್ವಾಮಿಗಳ ಪುರಾಣ ಪ್ರವಚನ ನಡೆಯಲಿದೆ ಎಂದರು.
ಜನವರಿ 16ರಂದು ಪುರಾಣ ಪ್ರವಚನದ ಪ್ರಾರಂಭೋತ್ಸವ ಜರುಗಲಿದ್ದು, ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಚರಂತಿಮಠದ ಪ್ರಭುಸ್ವಾಮಿಗಳು ವಹಿಸಲಿದ್ದಾರೆ. ಶಿವಯೋಗ ಮಂದಿರದ ಉಪಾಧ್ಯಕ್ಷರಾದ ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ನೇತೃತ್ವ ವಹಿಸಿ ಪ್ರವಚನಕ್ಕೆ ಚಾಲನೆ ನೀಡುವರು. 21 ದಿನಗಳ ಕಾಲ ಹಾವೇರಿಯ ಅಕ್ಕಿಮಠದ ಗುರುಲಿಂಗ ಮಹಾಸ್ವಾಮಿಗಳು ಪ್ರವಚನ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಅಮೀನಗಡದ ಸಾಹಿತಿ ಎಚ್. ಬಿ. ರಂಗಾಪುರ ರಚಿಸಿದ “ಬಾಗಲಕೋಟೆಯ ಟೀಕಿನಮಠ–ಟೆಂಗಿನಮಠ ಪರಂಪರೆ” ಕೃತಿಯನ್ನು ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು ಬಿಡುಗಡೆಗೊಳಿಸಲಿದ್ದು, ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಆರ್. ಮೂಗನೂರಮಠ ಕೃತಿ ಪರಿಚಯ ಮಾಡುವರು.
ಪ್ರವಚನ ಅವಧಿಯಲ್ಲಿ ಎರಕಿಹಾಳದ ದೇವರಾಜ ಗವಾಯಿಗಳು ಹಾರ್ಮೋನಿಯಂ ಹಾಗೂ ಗಾಯನ, ಕೊಡೆಕಲ್‌ನ ಸುರೇಶ್‌ಕುಮಾರ ಹುಗಾರ ತಬಲಾ ಸಾಥ ನೀಡಲಿದ್ದಾರೆ.
ಪ್ರಭಾತ ಸಂಚಲನ:
ಜನವರಿ 16ರಿಂದ ಫೆಬ್ರುವರಿ 5ರವರೆಗೆ ಪ್ರತಿದಿನ ಬೆಳಿಗ್ಗೆ 6.30ರಿಂದ 8ರವರೆಗೆ ಪೂಜ್ಯ ಸ್ವಾಮಿಗಳ ನೇತೃತ್ವದಲ್ಲಿ ಪ್ರಭಾತ ಸಂಚಲನ ನಡೆಯಲಿದೆ. ಮೊದಲ 7 ದಿನ ಹಳೆ ಬಾಗಲಕೋಟೆ, ಮುಂದಿನ 7 ದಿನ ವಿದ್ಯಾಗಿರಿ ಹಾಗೂ ಅಂತಿಮ 7 ದಿನ ನವನಗರ ಪ್ರದೇಶಗಳಲ್ಲಿ ಸಂಚಲನ ಜರುಗಲಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ತನು-ಮನದಿಂದ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಕೋಟೆಕಲ್–ಕಮತಗಿಯ ಹೊಳೆ ಹುಚ್ಚೇಶ್ವರ ಸ್ವಾಮಿಗಳು, ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು, ಬೆಳಗಾವಿ ಕಾರಂಜಿಮಠದ ಶಿವಯೋಗಿದೇವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಜಿ. ಎನ್. ಪಾಟೀಲ, ಗೌರವ ಕಾರ್ಯದರ್ಶಿ ಮಹೇಶ್ ಅಥಣಿ ಉಪಸ್ಥಿತರಿದ್ದರು.
ಸಮಿತಿ ರಚನೆ:
ಟೆಂಗಿನಮಠ–ಟೀಕಿನಮಠದ ಶ್ರೀ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಸಮಿತಿಗೆ ಗೌರವಾಧ್ಯಕ್ಷರಾಗಿ ಚರಂತಿಮಠದ ಪ್ರಭುಸ್ವಾಮಿಗಳು, ಅಧ್ಯಕ್ಷರಾಗಿ ಲೋಕಸಭಾ ಸದಸ್ಯ ಪಿ. ಸಿ. ಗದ್ದಿಗೌಡರ, ಕಾರ್ಯಾಧ್ಯಕ್ಷರಾಗಿ ಡಾ. ವೀರಣ್ಣ ಚರಂತಿಮಠ ಅವರನ್ನು ನೇಮಿಸಲಾಗಿದ್ದು, ವಿವಿಧ ಉಪಸಮಿತಿಗಳನ್ನೂ ರಚಿಸಲಾಗಿದೆ.
#Teekinamatha #MallikarjunaDeshikar #NiranjanaCharapattadhikara #BagalkoteNews #VeerashaivaLingayat #ReligiousEvent #PuranaPravachana #PrabhataSanchalana #KarnatakaSpiritual #TempleFestival

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ