ಬಾಗಲಕೋಟೆ:ಔದ್ಯೋಗಿಕ ಕ್ಷೇತ್ರದಲ್ಲಿ ತಂತ್ರಜ್ಞಾನ ಜ್ಞಾನಕ್ಕಿಂತಲೂ ಉತ್ತಮ ವ್ಯಕ್ತಿತ್ವ, ಭಾವನಾತ್ಮಕ ಬುದ್ಧಿವಂತಿಕೆ ಮತ್ತು ವೃತ್ತಿಪರ ನಡೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಡೇಟಾಲಾಜಿಕ್ಸ್ ಇಂಡಿಯಾ ಸಂಸ್ಥೆಯ ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸನ್ ವರದರಾಜನ್ ಹೇಳಿದರು.
Petkarmedia:ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ.ನಗರದ ಪ್ರತಿಷ್ಠಿತ ಬಿ.ವಿ.ವಿ. ಸಂಘದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಮ್ಸ್) ಮಹಾವಿದ್ಯಾಲಯದಲ್ಲಿ ಭಾನುವಾರ ನಡೆದ “ಪ್ಲೇಸ್‌ಮೆಂಟ್ ಸಕ್ಸಸ್‌ಮೀಟ್ – 2025” ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು,
ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಸಂಸ್ಥಾ ನಡವಳಿಕೆ, ಉದ್ಯೋಗಿ ಧಾರಣೆ, ಭಾವನಾತ್ಮಕ ಬುದ್ಧಿವಂತಿಕೆ, ಕಾರ್ಯಪಡೆ ವೈವಿಧ್ಯತೆ, ಉದ್ಯೋಗಿ ಕಾರ್ಯಕ್ಷಮತೆ, ಗ್ರಾಹಕ ನಡವಳಿಕೆ ಮತ್ತು ಉದ್ಯೋಗಿ ಸಂಬಂಧಗಳು ಪ್ರಮುಖ ಸಂಶೋಧನಾ ಕ್ಷೇತ್ರಗಳಾಗಿವೆ ಎಂದು ತಿಳಿಸಿದರು.
ಸಂದರ್ಶನ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಕೌಶಲ್ಯಕ್ಕಿಂತಲೂ ವ್ಯಕ್ತಿತ್ವ ಮತ್ತು ನಡವಳಿಕೆಗಳೇ ಯಶಸ್ಸಿನ ಕೀಲಿಕೈ ಎಂದರು.
ಅತಿಥಿಗಳಾಗಿ ಆರ್.ಡಿ.ಎಫ್ & ಬಿಇಸಿ–ಎಸ್‌ಟಿಇಪಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಬಿ.ಎಸ್. ಅಂಗಡಿ ಹಾಗೂ ರೆಂಟೋಕಿಲ್ ಕಂಪನಿಯ ಸೀನಿಯರ್ ಎಕ್ಸಿಕ್ಯೂಟಿವ್ ಅಕ್ಷಯ ಭಟ್ ಮಾತನಾಡಿ, ಪ್ಲೇಸ್‌ಮೆಂಟ್ ಸಕ್ಸಸ್ ಮೀಟ್ ಒಂದು ಸಾಧನೆಯ ಪ್ರತೀಕವಾಗಿದ್ದು, ವಿದ್ಯಾರ್ಥಿಗಳ ಯಶಸ್ಸು ಶಿಕ್ಷಕರ ಹಾಗೂ ಪಾಲಕರ ಕನಸುಗಳ ಸಾಕಾರವಾಗಿದೆ ಎಂದು ಶ್ಲಾಘಿಸಿದರು.
ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಹೆಚ್.ಎಸ್.ಕೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಉಪ ಪ್ರಾಂಶುಪಾಲ ಡಾ. ಸಿ.ಎಸ್. ಹಿರೇಮಠ ಅವರು
"ಸ್ವಗೃಹೇ ಪೂಜ್ಯತೆ ಪಿತೃಃ, ಸ್ವದೇಶೇ ಪೂಜ್ಯತೆ ರಾಜಾಃ, ವಿದ್ವಾನ್ ಸರ್ವತ್ರ ಪೂಜ್ಯತೆ" ಎಂಬ ಶ್ಲೋಕದ ಅರ್ಥ ವಿವರಿಸಿ, ರಾಷ್ಟ್ರಾಭ್ಯುದಯಕ್ಕಾಗಿ ವಿದ್ಯಾರ್ಥಿಗಳ ಜ್ಞಾನಸಾಧನೆ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಿಮ್ಸ್ ನಿರ್ದೇಶಕ ಡಾ. ಪ್ರಕಾಶ್ ಕೆ. ವಡವಡಗಿರವರು,
ಬಾಗಲಕೋಟೆಯ ವಿದ್ಯಾರ್ಥಿಗಳು ಜಾಗತಿಕ ಕಂಪನಿಗಳಲ್ಲಿ ಉದ್ಯೋಗ ಪಡೆಯುತ್ತಿರುವುದು ಸಂಸ್ಥೆಯ ಶಿಕ್ಷಣ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಹಾಗೂ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸುಳಿಭಾವಿ ಅವರ ಆಶಯದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ ಎಂದರು.
ಕಾರ್ಪೋರೇಟ್ ವಲಯದ ಪ್ರಮುಖರಾದ ಉದಯವರ್ಮಾ ಕೆ (ಎಕ್ಸೆಲ್ಡ್ ಇಂಡಸ್ಟ್ರೀಸ್), ಪ್ರಜ್ವಲ್ ವಿ. ಚಟ್ಪಲ್ಲಿ (ಕ್ಯಾಡ್‌ಮ್ಯಾಕ್ಸ್ ಸೊಲ್ಯೂಷನ್ಸ್), ಪ್ರದೀಪ್ ಎ.ಎಂ (ಪಿಸಿಐ) ಮತ್ತು ಎನ್.ಜೆ. ಇಂಡಿಯಾ ಇನ್ವೆಸ್ಟ್ ಪ್ರತಿನಿಧಿಗಳು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಿದರು.
ಪ್ರಮಾಣಪತ್ರ ವಿತರಣೆ:
ಈ ಸಾಲಿನ ಪ್ಲೇಸ್‌ಮೆಂಟ್‌ನಲ್ಲಿ ಬರ್ಜರ್ ಪೇಂಟ್ಸ್, ಎನ್.ಜೆ. ಇನ್ವೆಸ್ಟ್‌ಮೆಂಟ್ಸ್, ಕ್ಯಾಡ್‌ಮ್ಯಾಕ್ಸ್ ಹಾಗೂ ಡೇಟಾಲಾಜಿಕ್ಸ್ ಕಂಪನಿಗಳಲ್ಲಿಗರಿಷ್ಠ ₹7 ಲಕ್ಷ ವಾರ್ಷಿಕ ಪ್ಯಾಕೇಜ್ ಹಾಗೂ ಸರಾಸರಿ ₹4 ಲಕ್ಷ ಪ್ಯಾಕೇಜ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
“ಸ್ಪರ್ಧಾತ್ಮಕ ಯುಗದಲ್ಲಿ ಬಿಮ್ಸ್ ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳಿಗೆ ಆಯ್ಕೆಯಾಗಿರುವುದು ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ ಮತ್ತು ಮಾನವೀಯ ಮೌಲ್ಯಗಳ ಫಲವಾಗಿದೆ.”
-ಡಾ. ವೀರಣ್ಣ ಚರಂತಿಮಠ , ಬವಿವ ಸಂಘದ ಕಾರ್ಯಾಧ್ಯಕ್ಷ
#BIMSBagalkot,#PlacementSuccessMeet2025#BVVSangha#MBAPlacement#StudentSuccess#BagalkotNews#CareerGrowth#CampusPlacement


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ