ಜಮಖಂಡಿ:ಸೋಮನಾಥ ಪುನರುಜ್ಜೀವನದ 75 ವರ್ಷ: ಜಂಬುಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಜಮಖಂಡಿ: ನಿರಂತರ ಪರಕೀಯರ  ಆಕ್ರಮಣಗಳ ನಡುವೆಯೂ ಭಾರತೀಯರ ಧರ್ಮನಿಷ್ಠೆ, ಆಧ್ಯಾತ್ಮಿಕ ಸಂಕಲ್ಪವಾಗಿರುವ ಸೋಮನಾಥ ಮಂದಿರದ ಪುನರುಜ್ಜೀವನಕ್ಕೆ 75 ವರ್ಷಗಳು ಪೂರ್ಣಗೊಂಡ ಸ್ಮರಣಾರ್ಥವಾಗಿ ಇಂದು ಜಮಖಂಡಿಯ ಪ್ರಸಿದ್ಧ ನೀಲಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಕಾರ್ಯಕ್ರಮ ಆಯೋಜಿಸಲಾಯಿತು.

Petkarmedia:ನೀಲಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಜಗದೀಶ್ ಗುಡಗುಂಟಿ ಅವರುಪ ಭಾಗವಹಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇಶದ ಶಾಂತಿ, ಸೌಹಾರ್ದತೆ ಹಾಗೂ ಧಾರ್ಮಿಕ ಏಕತೆಗೆ ಪ್ರಾರ್ಥಿಸಿದರು.

ಸೋಮನಾಥ ಮಂದಿರವು ಅನೇಕ ಆಕ್ರಮಣಗಳ ನಡುವೆಯೂ ಭಾರತೀಯ ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆಯ ಶಾಶ್ವತ ಸಂಕೇತವಾಗಿದೆ. ಅದರ ಪುನರ್ ನಿರ್ಮಾಣವು ಭಾರತದ ಆತ್ಮಗೌರವ ಮತ್ತು ಧಾರ್ಮಿಕ ಪುನರುಜ್ಜೀವನದ ಐತಿಹಾಸಿಕ ಪ್ರತೀಕವಾಗಿದ್ದು, ಮುಂದಿನ ತಲೆಮಾರಿಗೆ ಪ್ರೇರಣೆಯಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಜಂಬುಕೇಶ್ವರ ದೇವಸ್ಥಾನದಲ್ಲಿ ನಡೆದ ಈ ವಿಶೇಷ ಪೂಜೆಯಲ್ಲಿ ಭಕ್ತರು, ಧಾರ್ಮಿಕ ಮುಖಂಡರು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

#SomnathTemple #Jamkhandi #JambukeshwarTemple #JagadishGudugunti #TempleRevival #Petkarmedia #SpiritualIndia #IndianCulture

ಕಾಮೆಂಟ್‌ಗಳು