ಮುಧೋಳ: 77ನೇ ಗಣರಾಜ್ಯೋತ್ಸವದ ಅಂಗವಾಗಿ ದೆಹಲಿ ಕರ್ತವ್ಯ ಪಥದಲ್ಲಿ ನಡೆದ ಭವ್ಯ ಪರೇಡ್‌ನಲ್ಲಿ ಈ ಬಾರಿ ಒಂದು ವಿಶಿಷ್ಟ ದೃಶ್ಯ ದೇಶದ ಗಮನ ಸೆಳೆದಿತು.
ಅದು ಯಾವುದೇ ಕ್ಷಿಪಣಿ, ಯುದ್ಧ ವಾಹನ ಅಥವಾ ಸೈನಿಕ ತುಕಡಿಯಲ್ಲ; ಬದಲಾಗಿ ಕರ್ನಾಟಕದ ಹೆಮ್ಮೆ ಬಾಗಲಕೋಟೆ ಜಿಲ್ಲೆಯ ಮುದೋಳ ತಳಿ ಶ್ವಾನ ಪರೇಡ್‌ನಲ್ಲಿ ಭಾಗವಹಿಸಿ ಎಲ್ಲರ ಮನಗೆದ್ದಿತು.
ಗರ್ವ, ಶಿಸ್ತು ಮತ್ತು ಆತ್ಮವಿಶ್ವಾಸದೊಂದಿಗೆ ರಾಜಗಾಂಭೀರ್ಯ ಹೆಜ್ಜೆ ಹಾಕಿದ ಈ ನಾಲ್ಕು ಕಾಲಿನ ಯೋಧ ಅನೇಕ ಪ್ರೇಕ್ಷಕರಷ್ಟೇ ಅಲ್ಲ, ದೇಶದ ಕೋಟಿ ನಾಗರಿಕರ ಹೃದಯವನ್ನೂ ತನ್ನತ್ತ ಸೆಳೆದಿತು. ಈ ಬಾರಿ ಪ್ರಥಮ ಬಾರಿಗೆ ಕರ್ನಾಟಕದ ಮುದೋಳ ಶ್ವಾನಗಳು ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಿರುವುದು ಐತಿಹಾಸಿಕ ಕ್ಷಣವಾಗಿದ್ದು, ಇದು ಕೇವಲ ಒಂದು ಶ್ವಾನದ ಭಾಗವಹಿಸುವಿಕೆಯಾಗದೇ, ಕರ್ನಾಟಕದ ಸಂಸ್ಕೃತಿ, ಪರಂಪರೆ ಹಾಗೂ ಶೌರ್ಯದ ಪ್ರತಿನಿಧಿತ್ವವಾಗಿಯೂ ಗಮನ ಸೆಳೆಯಿತು.
ಮುದೋಳ ಶ್ವಾನ ತಳಿ ದೇಶಾದ್ಯಂತ ಅಪರೂಪ ಹಾಗೂ ವಿಶಿಷ್ಟವಾಗಿದ್ದು, ಅದರ ಇತಿಹಾಸವೂ ಅಷ್ಟೇ ರೋಚಕವಾಗಿದೆ. ಈ ಬಾರಿ ಪರೇಡ್‌ನಲ್ಲಿ ಜನ್ಸ್ಕಾರ್ ಕುದುರೆ, ಅಪರೂಪದ ಬ್ಯಾಕ್ಟ್ರಿಯನ್ ಒಂಟೆ ಸೇರಿದಂತೆ ಹಲವು ತಳಿಯ ಪ್ರಾಣಿಗಳು ಮೊದಲ ಬಾರಿಗೆ ಹೆಜ್ಜೆ ಹಾಕಿದವು. ಆದರೆ ಸ್ಲಿಮ್ ದೇಹ, ಉದ್ದ ಕಾಲುಗಳು, ತೀಕ್ಷ್ಣ ದೃಷ್ಟಿ ಹಾಗೂ ಆತ್ಮವಿಶ್ವಾಸದ ನಡಿಗೆಯೊಂದಿಗೆ ಸಾಗಿದ ಮುದೋಳ ಶ್ವಾನ ಎಲ್ಲರ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.
👉 ಸ್ಥಳೀಯ ಹಾಗೂ ರಾಜ್ಯದ ಪ್ರಮುಖ ಸುದ್ದಿಗಳಿಗಾಗಿ Petkarmedia ಅನ್ನು ಫಾಲೋ ಮಾಡಿ
#MudholDog
#ಮುದೋಳಶ್ವಾನ
#KarnatakaPride
#Bagalkote
#Mudhol
#RepublicDayParade
#KartavyaPath
#77ನೇಗಣರಾಜ್ಯೋತ್ಸವ
#DesiBreed
#IndianCulture
#Petkarmedia

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ