ಬಾದಾಮಿ: ಪೂಜೆ ಹಾಗೂ ವಾಸ್ತು ದೋಷ ಸರಿಪಡಿಸುವ ನೆಪದಲ್ಲಿ ಮನೆಮಂದಿಯನ್ನು ಯಾಮಾರಿಸಿ 23 ಗ್ರಾಂ ಚಿನ್ನದ ಸರ ಕದ್ದೊಯ್ದಿದ್ದ ನಕಲಿ ಕಳ್ಳ ಪೂಜಾರಿಯನ್ನು ಬಾದಾಮಿ ಪೊಲೀಸರು ಬಂಧಿಸಿ, ಕಳವುಗೊಳಿಸಿದ ಚಿನ್ನದ ಆಭರಣವನ್ನು ಜಪ್ತಿ ಮಾಡಿದ್ದಾರೆ.
Petkarmedia:ಆರೋಪಿಯಿಂದ 23 ಗ್ರಾಂ ಚಿನ್ನದ ಸರವನ್ನು ಜಪ್ತಿ ಮಾಡಿ, ಮನೆಮಂದಿಗೆ ಪೊಲೀಸರು ಹಸ್ತಾಂತರಿಸಿದರು.
ಬಾದಾಮಿ ಪಟ್ಟಣದ ಕಾಳಿದಾಸ ಕಾಲೇಜು ವ್ಯಾಪ್ತಿಯ ಮನೆಯೊಂದರಲ್ಲಿ ಡಿಸೆಂಬರ್ 29ರಂದು ಈ ಘಟನೆ ನಡೆದಿತ್ತು. ರಾಘವೇಂದ್ರ ಭಜರಂಗಿ ಎಂಬಾತನು ಪೂಜಾರಿ ವೇಷದಲ್ಲಿ ಮನೆಗೆ ಪ್ರವೇಶಿಸಿ, ವಾಸ್ತು ದೋಷ ನಿವಾರಣೆಗೆ ವಿಶೇಷ ಪೂಜೆ ಮಾಡಬೇಕಿದೆ ಎಂದು ನಂಬಿಸಿದ್ದಾನೆ. ಪೂಜಾ ಕಳಸದ ಮೇಲೆ ಚಿನ್ನದ ಆಭರಣ ಇಡಲು ಹೇಳಿದ ಆತ, ಮನೆಯಲ್ಲಿದ್ದ ಗಂಗವ್ವ ಪಾಟೀಲ್ ಅವರ ಚಿನ್ನದ ಸರವನ್ನು ಇಡಿಸಿದ್ದಾನೆ.
ನಂತರ ಮನೆಯಲ್ಲಿರುವ ಎಲ್ಲಾ ದೇವರ ಫೋಟೋಗಳಿಗೆ ನಮಸ್ಕಾರ ಮಾಡಿ ಬರಲು ಹೇಳಿ, ಮನೆಮಾಲಿಕರು ಪೂಜಾ ಸ್ಥಳದಿಂದ ದೂರ ಹೋದ ಕ್ಷಣದಲ್ಲೇ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾನೆ.
ಘಟನೆಯ ಮಾಹಿತಿ ಪಡೆದ ಬಾದಾಮಿ ಪೊಲೀಸ್ ಠಾಣೆ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 23 ಗ್ರಾಂ ಚಿನ್ನದ ಸರವನ್ನು ಜಪ್ತಿ ಮಾಡಿ, ಮನೆಮಂದಿಗೆ ಹಸ್ತಾಂತರಿಸಲಾಗಿದೆ.
ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತಹ ನಕಲಿ ಪೂಜಾರಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
Petkarmedia: ಸ್ಥಳೀಯ ಸುದ್ದಿಗಳಿಗಾಗಿ ನೋಡಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ