ಜಮಖಂಡಿ: ಹಿಪ್ಪರಗಿ ಬ್ಯಾರೇಜ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಗೇಟ್ ಅವಘಡದ ಸಂದರ್ಭದಲ್ಲಿ, ಸಮಯಕ್ಕೆ ಸರಿಯಾಗಿ ಸ್ಪಂದಿಸಿ ದುರಸ್ತಿ ಕಾರ್ಯ ಯಶಸ್ವಿಗೊಳಿಸಿದ ನಿರಾಣಿ ಸಮೂಹದ ಕಾರ್ಯಕ್ಕೆ ಕೃಷ್ಣಾತೀರದ ರೈತ ಸಮುದಾಯ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ.
Petkarmedia:ಹಿಪ್ಪರಗಿ ಗೇಟ್ ದೋಷ ಪರಿಶೀಲಿಸಿದ ಉದ್ಯಮಿ ಸಂಗಮೇಶ ನಿರಾಣಿ
ಗೇಟ್ ದೋಷದಿಂದಾಗಿ ಭಾರಿ ಪ್ರಮಾಣದ ನೀರು ವ್ಯರ್ಥವಾಗುವ ಭೀತಿ ಉಂಟಾಗಿದ್ದಾಗ, ಪರಿಸ್ಥಿತಿಯ ತೀವ್ರತೆಯನ್ನು ಅರಿತ ನಿರಾಣಿ ಸಮೂಹವು ತಕ್ಷಣವೇ ಸರ್ಕಾರಿ ಅಧಿಕಾರಿಗಳು, ಜಿಲ್ಲಾ ಆಡಳಿತ ಹಾಗೂ ನೀರಾವರಿ ಇಲಾಖೆಯೊಂದಿಗೆ ಕೈಜೋಡಿಸಿ ಕಾರ್ಯಪ್ರವೃತ್ತವಾಯಿತು. ಸಮೀಪದ ಸಾಯಿಪ್ರೀಯಾ ಕಾರ್ಖಾನೆಯ ನುರಿತ ಸಿವಿಲ್ ಹಾಗೂ ಮೆಕ್ಯಾನಿಕಲ್ ಸಿಬ್ಬಂದಿ, ಎರಡು ಬೃಹತ್ ಕ್ರೇನ್‌ಗಳು ಹಾಗೂ ಅತ್ಯಾಧುನಿಕ ಇಂಜಿನಿಯರಿಂಗ್ ಉಪಕರಣಗಳನ್ನು ಒದಗಿಸುವ ಮೂಲಕ ದುರಸ್ತಿ ಕಾರ್ಯಕ್ಕೆ ಅಗತ್ಯವಾದ ಸಂಪೂರ್ಣ ತಾಂತ್ರಿಕ ಬೆಂಬಲವನ್ನು ನೀಡಿತು.
ನಿರಾಣಿ ಸಮೂಹದ ಈ ತ್ವರಿತ ಮತ್ತು ಸಮನ್ವಯದ ಸಹಕಾರದಿಂದ ನಿಗದಿತ ಅವಧಿಗಿಂತ ಮುಂಚೆಯೇ ಗೇಟ್ ದುರಸ್ತಿ ಕಾರ್ಯ ಪೂರ್ಣಗೊಂಡು, ಕೃಷ್ಣಾ ನದಿಯ ಅಮೂಲ್ಯ ನೀರು ಪೋಲಾಗುವುದನ್ನು ತಪ್ಪಿಸುವಲ್ಲಿ ಮಹತ್ವದ ಯಶಸ್ಸು ದೊರಕಿತು. ಇದರಿಂದ ಸಾವಿರಾರು ರೈತರು ನಿಟ್ಟುಸಿರು ಬಿಡುವಂತಾಗಿದೆ.
ಇನ್ನೂ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ಅಧಿಕಾರಿಗಳು ಹಾಗೂ ಕಾರ್ಮಿಕರಿಗೆ ಊಟ ಮತ್ತು ಉಪಹಾರದ ವ್ಯವಸ್ಥೆ ಕಲ್ಪಿಸುವ ಮೂಲಕ ನಿರಾಣಿ ಸಮೂಹ ತನ್ನ ರೈತಪರ ಕಾಳಜಿ, ಮಾನವೀಯ ಮೌಲ್ಯಗಳು ಮತ್ತು ಜನಸ್ಪಂದನೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಈ ಕಷ್ಟಕಾಲದಲ್ಲಿ ಆಪತ್ಪಾಂಧವನಾಗಿ ನೆರವಾದ ನಿರಾಣಿ ಪರಿವಾರಕ್ಕೆ ಕೃಷ್ಣಾತೀರದ ರೈತ ಬಾಂಧವರ ಪರವಾಗಿ ಹೃದಯಪೂರ್ವಕ ಕೃತಜ್ಞತೆಗಳು ಹಾಗೂ ಅಭಿನಂದನೆಗಳು ವ್ಯಕ್ತವಾಗಿವೆ.
#HipparegiBarrage
#HipparegiGateRepair
#NiraniGroup
#KrishnaRiver
#FarmersRelief
#SaveWater
#IrrigationKarnataka
#BagalkotNews
#Jamkhandi
#FarmersSupport
#Petkarmedia
#RuralDevelopment
#PublicService

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ