ಜಮಖಂಡಿ:ಕುಡಿಯುವ ನೀರು–ಹಕ್ಕುಪತ್ರ ಸಮಸ್ಯೆಗಳಿಗೆ ಪರಿಹಾರಕ್ಕೆ ಶಾಸಕ ಗುಡಗುಂಟಿ ಸೂಚನೆ

ಜಮಖಂಡಿ:ಮತಕ್ಷೇತ್ರದ ಕೊಣ್ಣೂರು ಗ್ರಾಮದ ಮಡ್ಡಿ ಪ್ಲಾಟ್ ಪ್ರದೇಶಕ್ಕೆ ಇಂದು ತಾಲೂಕಾ ಮಟ್ಟದ ಅಧಿಕಾರಿಗಳೊಂದಿಗೆ ಶಾಸಕ‌‌ ಜಗದೀಶ ಗುಡಗಂಟಿ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನು ಪರಿಶೀಲಿಸಿದರು.

Petkarmedia:ಮಡ್ಡಿ ಪ್ಲಾಟ್ ಪ್ರದೇಶಕ್ಕೆ ಇಂದು ತಾಲೂಕಾ ಮಟ್ಟದ ಅಧಿಕಾರಿಗಳೊಂದಿಗೆ ಶಾಸಕ‌‌ ಜಗದೀಶ ಗುಡಗಂಟಿ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನು ಪರಿಶೀಲಿಸಿದರು.

ಮಡ್ಡಿ ಪ್ಲಾಟ್‌ನಲ್ಲಿ ದೀರ್ಘಕಾಲದಿಂದ ಕುಡಿಯುವ ನೀರಿನ ಕೊರತೆ, ಹಕ್ಕುಪತ್ರ ವಿತರಣೆಯ ವಿಳಂಬ ಹಾಗೂ ಇತರೆ ಮೂಲಭೂತ ಸೌಲಭ್ಯಗಳ ಸಮಸ್ಯೆಗಳು ಜನರನ್ನು ಕಾಡುತ್ತಿದ್ದ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಯಿತು.

ಇದೇ ಸಂದರ್ಭದಲ್ಲಿ ಬಹು ದಿನಗಳ ಬೇಡಿಕೆಯಿದ್ದ ಕೊಣ್ಣೂರು ಮಡ್ಡಿ ಪ್ಲಾಟ್ ಬಸ್ ನಿಲ್ದಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಈ ಮೂಲಕ ಈ ಭಾಗದ ಜನರಿಗೆ ಸಾರಿಗೆ ಸೌಲಭ್ಯಗಳು ಇನ್ನಷ್ಟು ಸುಲಭವಾಗಲಿವೆ ಎಂದು ತಿಳಿಸಲಾಯಿತು.

ಸ್ಥಳೀಯ ನಿವಾಸಿಗಳು ಈ ಬೆಳವಣಿಗೆಗೆ ಸಂತಸ ವ್ಯಕ್ತಪಡಿಸಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

🏷️

#ಜಮಖಂಡಿ #ಕೊಣ್ಣೂರು #ಮಡ್ಡಿಪ್ಲಾಟ್ #BusStand #DrinkingWater #PublicIssues #DevelopmentWorks #JamkhandiConstituency #KarnatakaNews

ಕಾಮೆಂಟ್‌ಗಳು