ಬಾಗಲಕೋಟೆ:ಕರ್ನಾಟಕದ ಯೋಗ ಕ್ರೀಡಾಪಟುಗಳ ಭರ್ಜರಿ ಸಾಧನೆ

ಬಾಗಲಕೋಟೆ:ಮಲೇಷಿಯಾದ ಕೌಲಾಲಂಪುರನಲ್ಲಿ ಜನವರಿ 17ರಿಂದ 20ರವರೆಗೆ ನಡೆದ ಪ್ರತಿಷ್ಠಿತ ಇಂಡೋ–ಮಲೇಷಿಯಾ ಅಂತರರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್–2026ರಲ್ಲಿ ಕರ್ನಾಟಕದ ಯೋಗ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

Petkarmedia: ಯೋಗ ಪಟು ವಿಜಯಮಹಾಂತೇಶ

ಈ ಚಾಂಪಿಯನ್‌ಶಿಪ್ ಅನ್ನು World Yoga and Sports Education Council (ರಿ.) ಆಯೋಜಿಸಿದ್ದು, Avinash Yoga Foundation (ರಿ.) ಸಹ-ಆಯೋಜಕರಾಗಿದ್ದರು.

ಸ್ಪರ್ಧೆಯಲ್ಲಿ ಕರ್ನಾಟಕದ ಪ್ರತಿಭಾವಂತ ಯೋಗ ಕ್ರೀಡಾಪಟು ವಿಜಯಮಹಾಂತೇಶ ಎಸ್.ಎಸ್. (ಗುಳೇದಗುಡ್ಡ) ಅವರು ವಿಶಿಷ್ಟ ಸಾಧನೆ ಮಾಡಿದರು. ಟ್ರೆಡಿಷನಲ್ (ಅಥ್ಲೆಟಿಕ್) ಯೋಗ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಒಂದು ಚಿನ್ನದ ಗೌರವಕ್ಕೆ ಪಾತ್ರರಾದರು. ಅವರ ಶಿಸ್ತುಬದ್ಧತೆ, ನಿಖರ ಆಸನ ಪ್ರದರ್ಶನ ಹಾಗೂ ಸಮರ್ಪಿತ ಅಭ್ಯಾಸಕ್ಕೆ ಯೋಗ ನ್ಯಾಯಾಧೀಶರು ಹಾಗೂ ಪ್ರೇಕ್ಷಕರಿಂದ ಭಾರೀ ಪ್ರಶಂಸೆ ವ್ಯಕ್ತವಾಯಿತು.

ಈ ಇಂಡೋ–ಮಲೇಷಿಯಾ ಯೋಗ ಚಾಂಪಿಯನ್‌ಶಿಪ್ ವರ್ಲ್ಡ್ ಯೋಗ ಮತ್ತು ಸ್ಪೋರ್ಟ್ಸ್ ಎಜುಕೇಶನ್ ಕೌನ್ಸಿಲ್ (ರಿ.) ಪ್ರಧಾನ ಕಾರ್ಯದರ್ಶಿ ಶ್ರೀ ಅವಿನಾಶ್ ಕೆ.ಎಂ. ಅವರ ನೇತೃತ್ವದಲ್ಲಿ ನಡೆಯಿತು. ಮಲೇಷ್ಯಾದ ಮುಖ್ಯ ಅತಿಥಿ ಶ್ರೀ ಜೈನೋ ಅವರ ಅಧ್ಯಕ್ಷತೆಯಲ್ಲಿ ಸ್ಪರ್ಧೆಗಳು ಯಶಸ್ವಿಯಾಗಿ ಸಂಪನ್ನಗೊಂಡವು.


ಸ್ಥಳೀಯ ಸುದ್ದಿಗಳಿಗಾಗಿ ನ್ಯೂಸ್ ವೆಬ್ ಸೈಟ್ Petkarmedia.com ಅನ್ನು ಫಾಲೋ ಮಾಡಿ#Petkarmedia#PetkarmediaCom#PetkarmediaNews#ಸ್ಥಳೀಯಸುದ್ದಿ#ಗ್ರಾಮೀಣಸುದ್ದಿ#ಕರ್ನಾಟಕಸುದ್ದಿ#KannadaNews#LocalNews#DigitalMedia#SupportLocalMedia

ಕಾಮೆಂಟ್‌ಗಳು