ಜಿಲ್ಲಾ ಉಸ್ತುವಾರಿ ಸಚಿವ ಕ್ಷೇತ್ರದಲ್ಲೇ ಸಮಸ್ಯೆಗಳ ಕೊರತೆ: ಜನಾಕ್ರೋಶ

ಮುಧೋಳ: ಲೋಕಾಪುರ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ದೀರ್ಘಕಾಲದಿಂದ ಸಾರ್ವಜನಿಕರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಲೋಕಾಪುರ ಅಭಿವೃದ್ಧಿ ಯುವ ಸಮಿತಿಯ ನೇತೃತ್ವದಲ್ಲಿ ವಿವಿಧ ವಾರ್ಡುಗಳ ಸಾರ್ವಜನಿಕರು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. 

Petkarmedia:ಮೂಲಭೂತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಸಚಿವ ತಿಮ್ಮಾಪುರ ಗೆ ಮನವಿ

ನಂತರ ಪಾದಯಾತ್ರೆ ಮೂಲಕ ಪಟ್ಟಣ ಪಂಚಾಯತಿಗೆ ತೆರಳಿ ಧರಣಿ ನಡೆಸಿ ಘೋಷಣೆ ಕೂಗಿದರು. ಪಟ್ಟಣ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ದುರ್ವರ್ತನೆ, ಕೆಲಸಗಳ ವಿಳಂಬ ಮತ್ತು ಲಂಚದ ಆರೋಪಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರಿಗೆ ಲೋಕಾಪುರ ಅಭಿವೃದ್ಧಿ ಯುವ ಸಮಿತಿಯ ನೇತೃತ್ವದಲ್ಲಿ ಸಾರ್ವಜನಿಕರ ಮನವಿ ಸಲ್ಲಿಸಿದರು. ಸಾರ್ವಜನಿಕರ ಮನವಿಯಲ್ಲಿ ಪೇ ಅಂಡ್ ಯೂಸ್ ಮಾದರಿಯಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮಾಡಬೇಕು. ಪಟ್ಟಣದಾದ್ಯಂತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಮುಖ್ಯ ರಸ್ತೆಗಳ ಡಿವೈಡರ್ಗಳ ಮೇಲೆ ಬೀದಿ ದೀಪಗಳ ಅಳವಡಿಕೆ ಮಾಡಬೇಕು. ಪಟ್ಟಣ ಪಂಚಾಯತಿ ಸಿಬ್ಬಂದಿಗಳಿAದ ಕೆಲಸ ವಿಳಂಬ ತಡೆಯುವದು, ಲಂಚಮುಕ್ತ ಆಡಳಿv ವ್ಯವಸ್ಥೆ ಕಲ್ಪಿಸಬೇಕು. ಮನೆ ಉತಾರ (ಇ-ಖಾತಾ) ಸಮಸ್ಯೆಗಳ ತ್ವರಿತ ಪರಿಹಾರ ನೀಡಬೇಕು.ವಿದ್ಯುತ್ ಚಿತಾಗಾರ ಮತ್ತು ಮುಕ್ತಿ ವಾಹನ ವ್ಯವಸ್ಥೆ ಕಲ್ಪಿಸಬೇಕು.ಸ್ಮಶಾನಗಳ ಅಭಿವೃದ್ಧಿಗೆ ಒತ್ತುನೀಡಬೇಕು. ಹಳ್ಳಗಳಲ್ಲಿ ಮಾಂಸ ಹಾಗೂ ತ್ಯಾಜ್ಯ ಹಾಕುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ಬಸವೇಶ್ವರ ಸರ್ಕಲ್ ಸುತ್ತಮುತ್ತ ರಸ್ತೆ ಬಿಟ್ಟು ಬೇರೆಡೆ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಅಗಸಿಯಿಂದ ಮೇನ್ ಬಜಾರ್ ವರೆಗೆ ವಾಹನ ಸಂಚಾರ ಸುಗಮಗೊಳಿಸಬೇಕು. ಸ್ಥಗಿತಗೊಂಡ ಶುದ್ಧ ನೀರಿನ ಘಟಕಗಳನ್ನು ಪುನರಾರಂಭಿಸಬೇಕು . ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಅಗತ್ಯ ಸೌಲಭ್ಯ ಒದಗಿಸಬೇಕು. ಶೀಘ್ರ ಹಾಗೂ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಮನವಿಯಲ್ಲಿ ಆಗ್ರಹಿಸಿದ್ದಾರೆ.

ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಮುಧೋಳದ ಮಾದರಿಯಲ್ಲಿ ಲೋಕಾಪುರದಲ್ಲಿಯೂ 24/7 ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಈಗಾಗಲೇ ನಾಲ್ಕು ಕಡೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದ ಅವರು, ಎಲ್ಲವನ್ನೂ ಸರ್ಕಾರವೇ ಮಾಡುವುದಕ್ಕಿಂತ ಜನರ ಸಹಕಾರವೂ ಅಗತ್ಯವಿದೆ ಎಂದರು.

ಇ-ಖಾತಾ ಸಮಸ್ಯೆಗೆ ಸಂಬಂಧಿಸಿದಂತೆ ಲಂಚಮುಕ್ತ ವ್ಯವಸ್ಥೆಗಾಗಿ ಆನ್ಲೈನ್ ಪ್ರಕ್ರಿಯೆ ಜಾರಿಯಲ್ಲಿದ್ದು, ಹೊಸ ವ್ಯವಸ್ಥೆಗೆ ಜನರು ಹೊಂದಿಕೊಳ್ಳಬೇಕಿದೆ ಎಂದು ತಿಳಿಸಿದರು. ಪಟ್ಟಣ ಪಂಚಾಯತಿಯಲ್ಲಿ ಸಿಬ್ಬಂದಿ ಕೊರತೆ ಇರುವುದನ್ನು ಒಪ್ಪಿಕೊಂಡು, ಅದನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.  ಈ  ಪ್ರತಿಭಟನೆಯಲ್ಲಿ ಲೋಕಾಪುರ ಅಭಿವೃದ್ಧಿ ಯುವ ಸಮಿತಿಯ ವಿಕ್ರಮ್ ನಂದಯ್ಯಗೋಳ, ಮಲ್ಲಪ್ಪ ಅಂಗಡಿ, ನೀಲೇಶ ಬನ್ನೂರು, ವೆಂಕಟೇಶ ತುಳಸಿಗೇರಿ,ಭೀಮಸಿ ಅವರಾದಿ, ಶ್ರೀಕಾಂತ ಅಮೋಜಿ, ಸದಾಶಿವ ನಾವಿ, ಮಹೇಶ ಗಾಣಗೇರ, ಮಾರುತಿ ಜೋಶಿ, ಅನೀಲ ಹಂಚಾಟೆ, ಕುಮಾರ ಗಸ್ತಿ , ರೇಖಾ ನರಹಟ್ಟಿ, ಶೋಭಾ ಶಿರಹಟ್ಟಿ, ರಾಧಿಕಾರಿ ಕರೆಯನ್ನವರ, ಶೋಭಾ ನರೇಂದ್ರ, ಭಾರತಿ ಹಿರೇಮಠ, ವಾಣಿ ಮನ್ನೂರು, ತುಂಗಮ್ಮಾ ಪಾಟೀಲ, ಮಾದೇವಿ ಮುತ್ತಿನಮಠ, ಸಂಜನಾ ಚವ್ಹಾಣ, ಸವಿತಾ ವಾಸನದ ಇತರರು ಇದ್ದರು.

Petkarmedia:ಸ್ಥಳೀಯ ಸುದ್ದಿಗಳಿಗಾಗಿ ನೋಡಿ.

ಕಾಮೆಂಟ್‌ಗಳು