ಅಗ್ನಿ ಅವಘಡ–ಕಬ್ಬು ಬೆಳೆ ಹಾನಿ ಪರಿಶೀಲಿಸಿದ ಸಚಿವ ತಿಮ್ಮಾಪೂರ

ಮುಧೋಳ ತಾಲ್ಲೂಕಿನ ಇಂದು ರೂಗಿ ಗ್ರಾಮಕ್ಕೆಅಬಕಾರಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ. ತಿಮ್ಮಾಪೂರ ಅವರು ಭೇಟಿ ನೀಡಿ, ಅಗ್ನಿ ಅವಘಡದಿಂದ ಕಬ್ಬು ಬೆಳೆಗೆ ಸಂಭವಿಸಿದ ಹಾನಿಯನ್ನು ಸ್ಥಳದಲ್ಲೇ ಪರಿಶೀಲಿಸಿದರು.


Petkarmedia:ಅಗ್ನಿ ಅವಘಡದಿಂದ ಕಬ್ಬು ಬೆಳೆಗೆ ಸಂಭವಿಸಿದ ಹಾನಿಯನ್ನು  ಸ್ಥಳದಲ್ಲೇ ಸಚಿವ ತಿಮ್ಮಾಪುರ ಪರಿಶೀಲಿಸಿದರು.

ಸಚಿವರು ಸಂತ್ರಸ್ತ ರೈತರೊಂದಿಗೆ ಮಾತುಕತೆ ನಡೆಸಿ, ಬೆಳೆ ಹಾನಿಯ ಪ್ರಮಾಣ ಹಾಗೂ ನಷ್ಟದ ವಿವರಗಳನ್ನು ಪಡೆದುಕೊಂಡರು. ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಆಲಿಸಿದ ಅವರು, ತ್ವರಿತವಾಗಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬೆಳೆ ಹಾನಿಗೆ ಸಂಬಂಧಿಸಿದ ವರದಿ ಸಿದ್ಧಗೊಳಿಸಿ, ಪರಿಹಾರ ವಿತರಣೆಯ ಪ್ರಕ್ರಿಯೆಯನ್ನು ವೇಗವಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲೋಕಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ ವಕೀಲರು, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ್, ಪಕ್ಷದ ಮುಖಂಡ ಉದಯಸಿಂಗ ಪಡತಾರೆ, ಸಂತ್ರಸ್ತ ರೈತರು ಹಾಗೂ ಸ್ಥಳೀಯ ಅಧಿಕಾರಿಗಳು ಉಪಸ್ಥಿತರಿದ್ದರು.

Petkarmedia: ಸ್ಥಳೀಯ ಸುದ್ದಿಗಳಿಗಾಗಿ ನೋಡಿ

ಕಾಮೆಂಟ್‌ಗಳು