ಬಾದಾಮಿ ಸಮೀಪದ ಬನಶಂಕರಿದೇವಿ ದೇವಸ್ಥಾನದ ಎದುರಿನ ಹರಿದ್ರಾತೀರ್ಥ ಪುಷ್ಕರಣಿ ಹೊಂಡದಲ್ಲಿ ಮಂಗಳವಾರ ವ್ಯಕ್ತಿಯೊಬ್ಬರು ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ.
Petkarmedia: ಹೊಂಡದಲ್ಲಿ ಬಿದ್ದ ವ್ಯಕ್ತಿ ಹುಡುಕಲು ಬಾದಾಮಿ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ನಡೆಸಿದರು
ಸ್ನಾನಕ್ಕಾಗಿ ಪುಷ್ಕರಣಿಗೆ ಇಳಿದ ವೇಳೆ ವ್ಯಕ್ತಿ ಮುಳುಗಿರಬಹುದೆಂದು ಸ್ಥಳೀಯರು ಶಂಕಿಸಿದ್ದು, ಮಾಹಿತಿ ದೊರಕುತ್ತಿದ್ದಂತೆ ಬಾದಾಮಿ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಬೋಟ್‌ಗಳ ಸಹಾಯದಿಂದ ಪುಷ್ಕರಣಿಯಲ್ಲಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
ಘಟನೆ ಬಾದಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮುಳುಗಿರುವ ವ್ಯಕ್ತಿಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ