ಬಾಗಲಕೋಟೆ: ಕುಡಿದು ಮತ್ತಲ್ಲಿ ಯದ್ವಾತದ್ವಾ ಕಾರು ಚಾಲನೆ ಮಾಡುತ್ತಿದ್ದ ಅಪರಿಚಿತ ಯುವಕನನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನವನಗರ ಡಿಸಿ ಕಚೇರಿ ಎಕ್ಸಿಟ್ ಗೇಟ್ ಬಳಿ ನಡೆದಿದೆ.
Petkarmedia:ಕುಡಿದು ಮತ್ತಲ್ಲಿ ಯದ್ವಾತದ್ವಾ ಕಾರು ಚಾಲನೆ ಮಾಡುತ್ತಿದ್ದ ಅಪರಿಚಿತ ಯುವಕನನ್ನು ಥಳಿಸಿದ ಸ್ಥಳೀಯರು.
ಕುಡಿದ ನಶೆಯಲ್ಲಿ ಹ್ಯೂಂಡೈ ಕಾರು ಚಲಾಯಿಸುತ್ತಿದ್ದ ಯುವಕ, ರಸ್ತೆ ಬದಿಯಿಂದ ಸಾಗುತ್ತಿದ್ದ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಅಪಾಯ ಸೃಷ್ಟಿಸಿದ್ದಾನೆ. ಯುವಕನ ಅಸಮರ್ಪಕ ಚಾಲನೆಯಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದು, ಸ್ಥಳೀಯರು ಕಾರನ್ನು ಬೆನ್ನಟ್ಟಿ ತಡೆದು ಯುವಕನನ್ನು ಥಳಿಸಿದ್ದಾರೆ ಎನ್ನಲಾಗಿದೆ. ಮಾಹಿತಿ ಪಡೆದ ತಕ್ಷಣ ನವನಗರ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿ, ಕುಡಿದು ಬಿದ್ದಿದ್ದ ಯುವಕನನ್ನು ಆಟೋ ಮೂಲಕ ವಶಕ್ಕೆ ಪಡೆದು ಮುಂದಿನ ಕ್ರಮಕ್ಕೆ ಮುಂದಾದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ