ಮುಧೋಳ:ಮಹಾಲಿಂಗಪುರ ಪಟ್ಟಣದ ಹೊರವಲಯದಲ್ಲಿರುವ ಉದ್ದಿನಕಡ್ಡಿ ತಯಾರಿಸುವ ಫ್ಯಾಕ್ಟರಿಯಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಫ್ಯಾಕ್ಟರಿ ಸಂಪೂರ್ಣವಾಗಿ ಸುಟ್ಟುಹೋಗಿರುವ ಘಟನೆ ನಡೆದಿದೆ. ಬೆಂಕಿಯ ತೀವ್ರತೆಗೆ ಯಂತ್ರೋಪಕರಣಗಳು ಹಾಗೂ ಕಚ್ಚಾ ವಸ್ತುಗಳು ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
Petkarmedia: ಅಗ್ನಿ ಅವಘಡಕ್ಕೆ ತುತ್ತಾದ. ಕಾರ್ಖಾನೆಗೆ ಸಿದ್ದು ಕೊಣ್ಣೂರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ತೇರದಾಳ ಮತಕ್ಷೇತ್ರದ ನಾಯಕರಾದ ಸಿದ್ದು ಕೊಣ್ಣೂರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿ ಅವಘಡದಿಂದ ಸಂಕಷ್ಟಕ್ಕೆ ಒಳಗಾದ ಫ್ಯಾಕ್ಟರಿ ಮಾಲೀಕರಿಗೆ ಮಾನವೀಯ ಸ್ಪಂದನೆ ತೋರಿದ ಅವರು, ತಮ್ಮ ಸ್ವಂತ ಹಣದಿಂದ ₹50,000 ಅನ್ನು ತಕ್ಷಣದ ಸಹಾಯಧನವಾಗಿ ನೀಡಿದರು.
Petkarmedia: ಉದ್ದಿನಕಡ್ಡಿ ಮಾಲೀಕರಿಗೆ ತಮ್ಮ ಸ್ವಂತ ಹಣದಿಂದ ₹50,000 ಅನ್ನು ತಕ್ಷಣದ ಸಹಾಯಧನವಾಗಿ ಸಿದ್ದು ಕೊಣ್ಣೂರ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದು ಕೊಣ್ಣೂರ ಅವರು, ದುರ್ಘಟನೆಗೆ ಒಳಗಾದವರಿಗೆ ಸರ್ಕಾರದ ಪರಿಹಾರ ಹಾಗೂ ಅಗತ್ಯ ಸಹಕಾರ ದೊರಕಿಸುವಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಸ್ಥಳೀಯರು ಹಾಗೂ ಕಾರ್ಮಿಕರು ಅವರ ಕ್ರಮವನ್ನು ಶ್ಲಾಘಿಸಿದ್ದಾರೆ.
Petkarmedia:ಸ್ಥಳೀಯ ಸುದ್ದಿ ಗಳಿಗೆ ನೋಡಿ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ