ಬಾದಾಮಿ: ದೆಹಲಿಯಲ್ಲಿ ಜ.26ರಂದು ನಡೆಯಲಿರುವ ರಾಷ್ಟ್ರದ ಮಹತ್ವದ ಗಣರಾಜ್ಯೋತ್ಸವ ಸಮಾರಂಭಕ್ಕೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ಪಿ.ಕೆ.ಪಿ.ಎಸ್.)ದ ಮುಖ್ಯ ಕಾರ್ಯನಿರ್ವಾಹಕರಾದ ಬಶೆಟ್ಟೆಪ್ಪ ಯಲ್ಲಪ್ಪ ಲಕ್ಕಸಕೊಪ್ಪ ಹಾಗೂ ಸಂಗೀತಾ ಬಶೆಟ್ಟೆಪ್ಪ ಲಕ್ಕಸಕೊಪ್ಪ ಅವರನ್ನು ವಿಶೇಷ ಆಹ್ವಾನಿತರಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸನ್ಮಾನ ಹಾಗೂ ಬೀಳ್ಕೊಡುಗೆ
ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಪಿ.ಕೆ.ಪಿ.ಎಸ್. ವತಿಯಿಂದ ಬಶೆಟ್ಟೆಪ್ಪ ಲಕ್ಕಸಕೊಪ್ಪ ದಂಪತಿಯನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮನಗೌಡ ಗೌಡಪ್ಪ ಗೌಡರ, ಉಪಾಧ್ಯಕ್ಷ ಭೀಮಪ್ಪ ಯಲ್ಲಪ್ಪ ನಾಯ್ಕರ ಸೇರಿದಂತೆ ನಿರ್ದೇಶಕರಾದ ತುಳಸಿಗೇರಪ್ಪ ಶಿವಪ್ಪ ಮೊಖಾಶಿ, ಲಕ್ಷ್ಮಣ ಹನಮಂತಗೌಡ ಗೌಡರ, ಹನಮಂತ ಬಸಪ್ಪ ಕಾಚಿಟ್ಟ, ಶರಣಬಸಪ್ಪ ಅಮರಪ್ಪ ಇಂಡ್ರಿ, ಸಂಗಪ್ಪ ಶಿವಪ್ಪ ಉಳ್ಳಾಗಡ್ಡಿ, ಹನಮಂತ ಯಂಕಪ್ಪ ಹಟ್ಟಿ, ರಾಮಪ್ಪ ದುರಗವ್ವ ಪೂಜಾರ, ಕವಿತಾ ರವಿಕುಮಾರ ಪಾಟೀಲ, ತುಳಸವ್ವ ನಿಂಗಪ್ಪ ಕೋಲ್ದಾರ, ನಿಂಬವ್ವ ಶಿವಲಿಂಗಪ್ಪ ಮೊಖಾಶಿ ಉಪಸ್ಥಿತರಿದ್ದರು.
ಇದೇ ವೇಳೆ ಕ್ಷೇತ್ರ ಸಿಬ್ಬಂದಿ ಸುಮಿತ್ರಾ ಅಂಗಡಿ, ಡಿಸಿಸಿ ಬ್ಯಾಂಕ್ ಕಟಗೇರಿ ಶಾಖೆಯ ವ್ಯವಸ್ಥಾಪಕಿ ಸುಮಂಗಲಾ ತುಬಾಕೆ, ಗುಳೇದಗುಡ್ಡ ತಾಲೂಕಿನ ಪಿ.ಕೆ.ಪಿ.ಎಸ್. ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಕಟಗೇರಿ ಹಾಗೂ ಸೂಳಿಕೇರಿ ಗ್ರಾಮದ ಗುರುಹಿರಿಯರು, ಬಿಡಿಸಿಸಿ ಬ್ಯಾಂಕ್ ಕಟಗೇರಿ ಶಾಖೆಯ ಸಿಬ್ಬಂದಿ ಹಾಗೂ ಕಟಗೇರಿ ಪಿ.ಕೆ.ಪಿ.ಎಸ್.ನ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
👉 ಸ್ಥಳೀಯ ಸುದ್ದಿಗಳಿಗೆ Petkarmedia.com ಫಾಲೋ ಮಾಡಿ
#Petkarmedia#BagalkoteNews#Badami#Katageri#LocalNews#KannadaNews#RepublicDayIndia#GanatantraDivas#DelhiRepublicDay#NationalPride#CooperativeSociety#FarmersPride#Karnataka

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ