ಬಾಗಲಕೋಟೆ: ಬೀದಿನಾಯಿ ದಾಳಿಯಿಂದ ಬಾಲಕಿಯೊಬ್ಬಳು ಅಸುನೀಗಿರುವ ಘಟನೆ ಜನಮನದಿಂದ ಮಾಸುವ ಮುನ್ನವೇ, ನಗರದಲ್ಲಿ ಮತ್ತೊಮ್ಮೆ ಬೀದಿನಾಯಿಗಳ ದಾಳಿ ಮುಂದುವರೆದಿದೆ.
Petkarmedia: ನಾಯಿ ಕಚ್ಚಿರುವುದು.
ಹಳೆ ಬಾಗಲಕೋಟೆಯ ತೆಂಗಿನಮಠದಲ್ಲಿ ಪ್ರವಚನ ಮುಗಿಸಿ ಮನೆಗೆ ತೆರಳುತ್ತಿದ್ದ ಹತ್ತಕ್ಕೂ ಹೆಚ್ಚು ಜನರ ಮೇಲೆ ಏಕಾಏಕಿ ಬೀದಿನಾಯಿಗಳು ದಾಳಿ ನಡೆಸಿವೆ. ತೆಂಗಿನಮಠ ಓಣಿಯಲ್ಲಿ ನಡೆದ ಈ ಘಟನೆಯಲ್ಲಿ ದಾರಿಹೋಕರ ಕೈ-ಕಾಲುಗಳಿಗೆ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ದಾಳಿಯಿಂದ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ನಿರಂತರವಾಗಿ ನಡೆಯುತ್ತಿರುವ ಇಂತಹ ಘಟನೆಗಳು ಸಾರ್ವಜನಿಕರ ಆತಂಕ ಹೆಚ್ಚಿಸಿದ್ದು, ಬೀದಿನಾಯಿಗಳ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಆರಂಭವಾಗಿದೆ.
ಸ್ಥಳೀಯ ಸುದ್ದಿಗಳಿಗಾಗಿ Petkarmedia ಅನ್ನು ಫಾಲೋ ಮಾಡಿ
#Bagalkote #StrayDogAttack #BidiNayiDali #PublicSafety #Petkarmedia #LocalNews #DogBite

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ