ಬಾಗಲಕೋಟೆ ನಗರದ ನವನಗರದ ಸೆಕ್ಟರ್ ನಂ.15ರಲ್ಲಿ ಬೀದಿ ನಾಯಿಗಳ ದಾಳಿಯಿಂದ ನಿರಪರಾಧ ಬಾಲಕಿ ಕು. ಅಲಿನಾ ರಾಜೇಸಾಬ ಲೋಕಾಪುರ (10) ಸಾವನ್ನಪ್ಪಿರುವುದು ಅತ್ಯಂತ ಖಂಡನೀಯ ಹಾಗೂ ಮನಕಲಕುವ ಘಟನೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಎಸ್. ಹದ್ಲಿ ತಿಳಿಸಿದ್ದಾರೆ.
Petkarmedia: ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಎಸ್. ಹದ್ಲಿ ತಿಳಿಸಿದ್ದಾರೆ.ಈ ದುರ್ಘಟನೆಯಿಂದ ಆಕ್ರೋಶಗೊಂಡಿರುವ ನಾವು, ಮೃತ ಬಾಲಕಿಯ ಕುಟುಂಬದ ದುಃಖದಲ್ಲಿ ಪಾಲ್ಗೊಂಡು ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ನವನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ನಿಯಂತ್ರಣದಲ್ಲಿ ಸಂಬಂಧಿಸಿದ ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅಮಾಯಕ ಜೀವದ ನಷ್ಟಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಘಟನೆಗೆ ನೇರ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ತಕ್ಷಣ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜೊತೆಗೆ ಮೃತ ಬಾಲಕಿಯ ಕುಟುಂಬಕ್ಕೆ ಜಿಲ್ಲಾಡಳಿತ ತಕ್ಷಣ ಸಮರ್ಪಕ ಪರಿಹಾರ ನೀಡಬೇಕು ಹಾಗೂ ಅಗತ್ಯ ಎಲ್ಲಾ ನೆರವನ್ನು ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಬೀದಿ ನಾಯಿಗಳ ನಿಯಂತ್ರಣ, ಲಸಿಕೆಕರಣ ಹಾಗೂ ಪುನರ್ವಸತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಮನವಿ ಮಾಡಿದ ಅವರು, ನಿರಪರಾಧ ಜೀವಗಳ ರಕ್ಷಣೆ ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
#Bagalkot#Navanagar#StreetDogsMenace#InnocentLifeLost#AdministrativeFailure#JusticeForAlina#PublicSafety#UrbanNegligence #SaveChildren#CivicResponsibilit

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ