ಬಾಗಲಕೋಟೆ: ಸಮೀಪದ ಗದ್ದನಕೇರಿ ಗ್ರಾಮದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಅಮರಶಿಲ್ಪಿ ಜಕಣಾಚಾರ್ಯರ ಸಂಸ್ಮರಣ ದಿನಾಚರಣೆ ಹಾಗೂ ವಿಶ್ವಕರ್ಮ ಪ್ರಭುವಿನ ಪೂಜಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ನೂತನ ಕಾಳಿಕಾದೇವಿ ಸ್ವ ಸಹಾಯ ಸಂಘವನ್ನು ಉದ್ಘಾಟಿಸಲಾಯಿತು.
Petkarmedia:ನೂತನ ಕಾಳಿಕಾದೇವಿ ಸ್ವ ಸಹಾಯ ಸಂಘವನ್ನು ಉದ್ಘಾಟಿಸಲಾಯಿತು.
ಗದ್ದನಕೇರಿಯ ಸಪ್ತಗಿರಿ ಬಡಾವಣೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಗದ್ದನಕೇರಿ ಶ್ರೀ ಮಳೆರಾಜೇಂದ್ರಸ್ವಾಮಿ ಮಠದ ಮಾತೆಯರಾದ ಪಾರ್ವತೆಮ್ಮ, ಶಾರದಾ ಹಾಗೂ ಸರಸ್ವತಿ ಅಮ್ಮನವರು ಸಾನಿಧ್ಯ ವಹಿಸಿದರು. ಅವರು ನೂತನ ಕಾಳಿಕಾದೇವಿ ಸ್ವ ಸಹಾಯ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಸ್ವಾವಲಂಭಿ ಬದುಕಿಗೆ ಸ್ವ ಸಹಾಯ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಇಂತಹ ಸಂಘಗಳ ಮೂಲಕ ಮಹಿಳೆಯರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದು ಆಶಿಸಿದರು.
ಸ್ವ ಸಹಾಯ ಸಂಘದ ಅಧ್ಯಕ್ಷೆ ರೇಣುಕಾ ಪತ್ತಾರ ಮಾತನಾಡಿ, ೨೦ ಮಹಿಳೆಯರನ್ನು ಒಳಗೊಂಡ ಈ ಸಂಘವು ಬಡ ಕುಟುಂಬಗಳಿಗೆ ಆರ್ಥಿಕ ನೆರವು, ಬಡ ಮಹಿಳೆಯರ ಶಿಕ್ಷಣ, ಸ್ವ ಉದ್ಯೋಗ ಉತ್ತೇಜನ ಸೇರಿದಂತೆ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ರಾಧಾ ಬಡಿಗೇರ, ಗೀತಾ ಎಂ. ಪತ್ತಾರ, ಶಾರದಾ ಸೋನಾರ, ಭಾಗೀರಥಿ ಪತ್ತಾರ, ಸುನಂದಾ ಬಡಿಗೇರ, ವಿಜಯಲಕ್ಷ್ಮಿ ಪತ್ತಾರ, ರೇಣುಕಾ ಬಡಿಗೇರ, ಜ್ಯೋತಿ ಅರ್ಕಸಾಲಿ, ಪದ್ಮಾವತಿ ಬಡಿಗೇರ, ಕೀರ್ತನಾ ಪತ್ತಾರ, ಶಾಂತವ್ವ ಬಡಿಗೇರ, ಕಾವೇರಿ ಬಡಿಗೇರ, ಶ್ವೇತಾ ಪತ್ತಾರ, ಸುನೀತಾ ಬಡಿಗೇರ, ಸುನಂದಾ ಪತ್ತಾರ, ಗೀತಾ ಬಡಿಗೇರ, ಲಕ್ಷ್ಮಿ ಸೋನಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Petkarmedia: ಸ್ಥಳೀಯ ಸುದ್ದಿಗಳಿಗಾಗಿ ನೋಡಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ