ಬಾಗಲಕೋಟೆ: ಏನಾಗಿದೆ ನಮ್ಮ ರಾಜಕೀಯ ಪಕ್ಷಗಳು ನಮ್ಮನ್ನು ನೀವು ಸುಮ್ಮನೆ ಇರೋಕೆ ಬಿಡೋದಿಲ್ಲ. ಬೆಳಿಗ್ಗೆ ಎದ್ದರೆ ನಮ್ಮಂತವರು ಯಾರಾದರೂ ಸಿಕ್ಕರೆ ಸಾಕು. ನಾಯಕತ್ವ ಬದಲಾವಣೆ ಅಂತ ಹೇಳಿ ನಿಮ್ಮಿಂದಲೇ ಅದು ದೊಡ್ಡದಾಗಿ ಹೋಯ್ತು. ಆ ತರಹದ್ದೇ ಏನೂ ಇಲ್ಲ. ಏನಾದರೂ ಇದ್ದರೆ ನಿಮಗೆ ಬಂದೇ ಬರುತ್ತದೆ. ನಿಮಗೆ ಹೇಳೇ ಹೇಳ್ತೀವಿ,” ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು,ಪಕ್ಷದೊಳಗಿನ ಗೊಂದಲದ ಕುರಿತು ಪ್ರತಿಕ್ರಿಯಿಸಿದ ಅವರು,“ಪಕ್ಷದಲ್ಲಿ ಆ ಕಡೆ ಈ ಕಡೆ (ಸಿಎಂ, ಡಿಸಿಎಂ ಕಡೆ) ಹತ್ತು ಜನರಿದ್ದಾರೆ. ಆ ಕಡೆ ಐದು ಜನ, ಈ ಕಡೆ ಐದು ಜನ ಇದ್ದಾರೆ. ಮೈಕ್ ಸಿಕ್ಕ ತಕ್ಷಣ, ಟಿವಿ ನೋಡಿದ ತಕ್ಷಣ ಏನೋ ಒಂದು ಹೇಳಿಬಿಡ್ತಾರೆ. ಅದರಿಂದ ಗೊಂದಲ ಸೃಷ್ಟಿಯಾಗಿದೆ ಇಲ್ಲ ಅಂತ ನಾನು ಹೇಳೋದಿಲ್ಲ. ಆದರೆ ಹತ್ತು ಜನ ಹತ್ತು ಜನರ ಮೇಲೆ ಯಾರೂ ಮಾತಾಡೋದಿಲ್ಲ,” ಎಂದರು.
ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು,
“ಸಿಎಂ ಬದಲಾವಣೆ ಅದೆಲ್ಲ ಹೈಕಮಾಂಡ್‌ಗೆ ಬಿಟ್ಟದ್ದು. ಅವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ, ಅದಕ್ಕೆ ನಾವು ಬದ್ದರಾಗಿದ್ದೇವೆ,” ಎಂದು ಹೇಳಿದರು.
#Bagalkote#RamalingaReddy#SIMChangeIssue#PoliticalStatement#CongressParty#HighCommand#CMChange#KarnatakaPolitics#SuddiPV#Petkarmedia

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ