ಬಾಗಲಕೋಟೆ ತಾಲೂಕಿನ ರಾಂಪುರ ಗ್ರಾಮದ ಖ್ಯಾತ ಚಿತ್ರಕಲಾವಿದರಾದ ಶ್ರೀ ಕೆಂಚಪ್ಪ ಬಡಿಗೇರ ಅವರು ತಮ್ಮ ಅಪೂರ್ವ ಕಲಾತ್ಮಕತೆಯಿಂದ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.
ಅವರು ಅಭಿಮಾನ ಹಾಗೂ ಗೌರವದ ಸಂಕೇತವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಭಾವಚಿತ್ರವನ್ನು ಧವಸ–ಧಾನ್ಯಗಳಲ್ಲಿ ಅತ್ಯಂತ ಸೃಜನಾತ್ಮಕವಾಗಿ ರೂಪಿಸಿ ವಿಶಿಷ್ಟ ಗೌರವ ಸಲ್ಲಿಸಿದ್ದಾರೆ.
ಈ ಕಲಾಕೃತಿಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲೇ ಈ ಕಲೆಯನ್ನು ಹಂಚಿಕೊಂಡು ಕಲಾವಿದನ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಇದರಿಂದ ಕಲಾವಿದ ಕೆಂಚಪ್ಪ ಬಡಿಗೇರ ಅವರಿಗೆ ರಾಷ್ಟ್ರಮಟ್ಟದ ಗೌರವ ದೊರೆತಂತಾಗಿದೆ.
ಕಲಾ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆಂಚಪ್ಪ ಬಡಿಗೇರ, ತಮ್ಮ ವೃತ್ತಿಜೀವನದಲ್ಲಿ ಅನೇಕ ಏಕವ್ಯಕ್ತಿ ಹಾಗೂ ಗುಂಪು ಚಿತ್ರಕಲಾ ಪ್ರದರ್ಶನಗಳು, ಕಾರ್ಯಾಗಾರಗಳು, ಉತ್ಸವಗಳು ಮತ್ತು ಕಲಾ ಸಮಾರಂಭಗಳಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದಾರೆ.
ಚಿತ್ರಕಲೆಯ ಜೊತೆಗೆ ಶಿಲ್ಪಕಲೆಯಲ್ಲೂ ಪರಿಣತಿ ಹೊಂದಿರುವ ಅವರು, ಕಲ್ಲು, ಮರ, ಸಿಮೆಂಟ್, ಫೈಬರ್, ಲೋಹ ಸೇರಿದಂತೆ ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ವಿಶಿಷ್ಟ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಇವರ ಸೃಜನಶೀಲತೆ ಕಲಾ ಲೋಕದಲ್ಲಿ ವಿಭಿನ್ನ ಗುರುತನ್ನು ಮೂಡಿಸಿದೆ.
ಈ ಅಪರೂಪದ ಕಲಾ ಸಾಧನೆಗಾಗಿ ಶ್ರೀ ಕೆಂಚಪ್ಪ ಬಡಿಗೇರ ಅವರಿಗೆ ಹಾರ್ದಿಕ ಶುಭಾಶಯಗಳು ಹಾಗೂ ಅಭಿನಂದನೆಗಳು ಸಲ್ಲಿಸಲಾಗಿವೆ.
#KenchappaBadiger
#RampurArtist
#BagalkotNews
#GrainArt
#CreativeIndia
#Petkarmedia
#KannadaArt
#IndianArtists
#PrahadJoshi
#ParashuramPetkar

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ