ವಿಶ್ವಪರಂಪರೆ ಹಂಪಿ ಭಾರತದ ಗರ್ವ: ಕೇಂದ್ರ ಸಚಿವ ಶೇಖಾವತ್

ವಿಜಯನಗರ:ವಿಶ್ವ ಪರಂಪರಾ ತಾಣವಾದ ಹಂಪಿ ವಿಜಯನಗರ ಸಾಮ್ರಾಜ್ಯದ ಅತ್ಯುನ್ನತ ಸಮೃದ್ಧಿ ಹಾಗೂ ವೈಭವದ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.

Petkarmedia: ಹಂಪಿಗೆ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್  ಭೇಟಿ ನೀಡಿದರು.

ಅವರು ಸೋಮವಾರ ಸಂಜೆ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಳಿಕ  ಮಾತನಾಡಿದರು. ಭಾರತದ ಸಂಸ್ಕೃತಿಯ ಮೇಲೆ ಇತಿಹಾಸದಲ್ಲಿ ಅನೇಕ ಬಾರಿ ದಾಳಿಗಳು ನಡೆದರೂ, ಇಂದಿನ ದಿನಗಳಲ್ಲಿ ಭಾರತವು ವಿಶ್ವದಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದಿದೆ. ಇಂತಹ ಅಪಾರ ವಾಸ್ತುಶಿಲ್ಪ ಸಮೃದ್ಧಿಯನ್ನು ಹೊಂದಿರುವ ಹಂಪಿಯ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಕಟಿಬದ್ಧವಾಗಿದೆ ಎಂದು ಅವರು ಹೇಳಿದರು.

ಇಂದು ಹಂಪಿಯಲ್ಲಿ ವಾಸ್ತವ್ಯವಿರುವ ಸಚಿವರು, ಮಂಗಳವಾರ ಬೆಳಿಗ್ಗೆ ಶ್ರೀ ಕೃಷ್ಣದೇವರಾಯರ ವಂಶಸ್ಥರಾದ ಕೃಷ್ಣದೇವರಾಯರೊಂದಿಗೆ ವಿಜಯ ವಿಠಲ ದೇವಸ್ಥಾನಕ್ಕೆ ತೆರಳಿ ಪ್ರವಾಸಿ ಮಾರ್ಗದರ್ಶಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಆನೆಗೊಂದಿಗೂ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಕಮಲಾಪುರ ಪುರಾತತ್ವ ವಸ್ತು ಸಂಗ್ರಹಾಲಯದಲ್ಲಿ ಡಿಜಿಟಲ್ ಗ್ಯಾಲರಿಯನ್ನು ಉದ್ಘಾಟಿಸಿ, ನಂತರ ಪುರಾತತ್ವ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.


Petkarmedia: ಸ್ಥಳೀಯ ಸುದ್ದಿಗಳಿಗಾಗಿ ನೋಡಿ.

ಕಾಮೆಂಟ್‌ಗಳು