ಬಾದಾಮಿ: ಉತ್ಸವದ ಅಂಗವಾಗಿ ನಗರದ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ದೃಶ್ಯ ಚಿತ್ರಕಲಾ ಶಿಬಿರವನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಂಗಳವಾರ ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಭಾಷೆ ಮತ್ತು ಲಿಪಿ ಹುಟ್ಟುವ ಮೊದಲು ಚಿತ್ರಕಲೆ ಅಸ್ತಿತ್ವದಲ್ಲಿತ್ತು. ಮಾನವನ ಮಾನಸಿಕ ನೆಮ್ಮದಿ ಹಾಗೂ ಬೌದ್ಧಿಕ ವಿಕಸನಕ್ಕೆ ಸಂಗೀತ ಮತ್ತು ಚಿತ್ರಕಲೆ ಅತ್ಯಂತ ಸಹಕಾರಿ ಎಂದರು. ಚಿತ್ರಕಲೆಯು ಕೇವಲ ರೇಖೆ ಬಿಡಿಸುವ ಕಲೆಯಲ್ಲ; ಅದು ಇತಿಹಾಸ, ಸಂಸ್ಕೃತಿ, ನಂಬಿಕೆಗಳು ಮತ್ತು ಭಾವನೆಗಳನ್ನು ದೃಶ್ಯ ರೂಪದಲ್ಲಿ ವ್ಯಕ್ತಪಡಿಸುವ ಅದ್ಭುತ ಮಾಧ್ಯಮವಾಗಿದೆ ಎಂದು ಹೇಳಿದರು.
ನಿವೃತ್ತ ಚಿತ್ರಕಲಾ ಶಿಕ್ಷಕ ಎಂ.ಐ. ಬಾರಾವಲಿ ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದರು. ಚಿತ್ರಕಲಾ ನಿರ್ದೇಶಕಿ ಸಂಗೀತಾ ಬಸವರಾಜ ಕೋಲಾರ, ಬಾದಾಮಿ ಪಿಎಸ್‌ಐ ಹನುಮಂತ ನೆರಳೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಹಿರೇಮಠ, ಮುಖಂಡ ಅಶೋಕ ಕೋಟನಕರ, ನಿವೃತ್ತ ಮುಖ್ಯಶಿಕ್ಷಕ ಎಸ್.ಎಂ. ಹಿರೇಮಠ ಹಾಗೂ ಎ.ಜಿ. ಇನಾಮದಾರ ಉಪಸ್ಥಿತರಿದ್ದರು.
ಸ್ಥಳೀಯ ಚಿತ್ರಕಲಾವಿದರನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೂ ನೀಡಿ ಆತ್ಮೀಯವಾಗಿ ಗೌರವಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಅಶೋಕ ನಾಗಠಾಣ ಹಾಗೂ ಕಲಾವಿದರಾದ ಶೌಕತ್ ವಾಚಮೇಕರ, ಎಚ್.ಕೆ. ಹುಡೇದ, ಗೋಪಾಲ ದೇವರಡ್ಡಿ, ಬಸವರಾಜ ಮರಿಗೌಡರ, ಮಹಾದೇವ ಜಗತಾಪ, ದಿನೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
#ChalukyaUtsava #Badami #VisualArtsCamp #ArtAndCulture #KarnatakaHeritage #Chimmankatti #ChalukyaFestival #IndianArt

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ