ಬಾದಾಮಿಯಿಂದ ಇಲಕಲ್ಲ ಮಾರ್ಗವಾಗಿ ಕಾರವಾರಕ್ಕೆ ನೇರ ಬಸ್ ಸೌಲಭ್ಯ ಕಲ್ಪಿಸಲು ನಾಗರಾಜ ಹೊಸಮನಿ ಒತ್ತಾಯ

ಬಾದಾಮಿ: ಐತಿಹಾಸಿಕ ತಾಣ ಬಾದಾಮಿಯ ಚಾಲುಕ್ಯರ ಕಾಲದ ಸ್ಮಾರಕಗಳು, ಪ್ರಸಿದ್ಧ ಪ್ರವಾಸಿ ತಾಣಗಳು, ಬನಶಂಕರಿ ದೇವಸ್ಥಾನ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಬಾದಾಮಿಯಿಂದ ಇಲಕಲ್ಲ ಮಾರ್ಗವಾಗಿ ಕಾರವಾರಕ್ಕೆ ನೇರ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಶ್ರೀ ಶಿವಶರಣ ಹರಳಯ್ಯ ಸಮಾಜದ ಅಧ್ಯಕ್ಷ ನಾಗರಾಜ ಹೊಸಮನಿ ಅವರು ಆಗ್ರಹಿಸಿದ್ದಾರೆ.

Petkarmedia: ಶ್ರೀ ಶಿವಶರಣ ಹರಳಯ್ಯ ಸಮಾಜದ ಅಧ್ಯಕ್ಷ ನಾಗರಾಜ ಹೊಸಮನಿ


ಈ ಕುರಿತು  ಪ್ರಕಟಣೆ ನೀಡಿರುವ ಅವರು, ಕಾರವಾರ ಕಡೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬಾದಾಮಿಗೆ ಬರುತ್ತಿದ್ದು, ಅವರಿಗೆ ನೇರ ಬಸ್ ವ್ಯವಸ್ಥೆ ಇಲ್ಲದ ಕಾರಣ ಪ್ರಯಾಣದಲ್ಲಿ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಅದೇ ರೀತಿ ಬಾದಾಮಿಯಿಂದ ಕಾರವಾರದ ಕಡಲತೀರ, ಬಂದರು ಹಾಗೂ ಇತರೆ ಪ್ರಮುಖ ಸ್ಥಳಗಳಿಗೆ ತೆರಳಲು ಸಹ ನೇರ ಬಸ್ ಸೌಲಭ್ಯ ಲಭ್ಯವಿಲ್ಲ ಎಂದು ಹೇಳಿದರು.

ಪ್ರಸ್ತುತ ಇರುವ ಇಲಕಲ್ಲ–ಕಾರವಾರ ಬಸ್ ಬಾಗಲಕೋಟೆ ಮಾರ್ಗವಾಗಿ ಸಂಚರಿಸುತ್ತಿದ್ದು, ಇದನ್ನು ಬಾದಾಮಿ ಮಾರ್ಗವಾಗಿ ವಿಸ್ತರಿಸುವಂತೆ ವ್ಯವಸ್ಥೆ ಮಾಡಬೇಕು. ಇಲ್ಲವೇ ಬಾದಾಮಿ–ಇಲಕಲ್ಲ–ಕಾರವಾರ ಮಾರ್ಗದಲ್ಲಿ ಪ್ರತ್ಯೇಕ ನೇರ ಬಸ್ ಸೇವೆ ಆರಂಭಿಸಬೇಕೆಂದು ಸರ್ಕಾರಕ್ಕೆ, ಸಾರಿಗೆ ಸಚಿವರಿಗೆ ಹಾಗೂ ಸಾರಿಗೆ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಮನವಿ ಮಾಡಿದ್ದಾರೆ.

ಮಕ್ಕಳೊಂದಿಗೆ ಪ್ರವಾಸ ಮಾಡುವ ಕುಟುಂಬಗಳಿಗೆ ಈಗಿನ ವ್ಯವಸ್ಥೆ ದೊಡ್ಡ ಸಮಸ್ಯೆಯಾಗಿದೆ. ನೇರ ಬಸ್ ಸೌಲಭ್ಯ ದೊರೆತಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂಬ ವಿಶ್ವಾಸವನ್ನು ನಾಗರಾಜ ಹೊಸಮನಿ ವ್ಯಕ್ತಪಡಿಸಿದ್ದಾರೆ.


#Badami #Ilkal #Karwar #DirectBusService #TourismKarnataka#Bagalkot #TransportDemand #PublicTransport 

ಕಾಮೆಂಟ್‌ಗಳು