ಬಾದಾಮಿ: ಪ್ರಸಿದ್ಧ ನಟಿ ಉಮಾಶ್ರೀ ಅಭಿನಯದ “ಶ್ರರ್ಮಿಷ್ಠೆ” ನಾಟಕವನ್ನು ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ. ತಿಮ್ಮಾಪೂರ ಅವರು ಭಾನುವಾರ ಬಾದಾಮಿಯಲ್ಲಿ ವೀಕ್ಷಿಸಿದರು.
ಬಾದಾಮಿ ಬನಶಂಕರಿ ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಮಾಶ್ರೀ ಅವರ ಅಭಿನಯವನ್ನು ಸಚಿವರು ಆಸಕ್ತಿಯಿಂದ ವೀಕ್ಷಿಸಿದರು. ನಾಟಕದ ನಂತರ ಮಾತನಾಡಿದ ಸಚಿವ ತಿಮ್ಮಾಪೂರ ಅವರು, “ಶ್ರಮಿಷ್ಠೆ” ನಾಟಕವು ಸಮಾಜದಲ್ಲಿ ಮಹಿಳೆಯರ ಸಂಘರ್ಷ, ಶ್ರಮ, ಸಾಧನೆ ಹಾಗೂ ಸಶಕ್ತೀಕರಣದ ಸಂದೇಶವನ್ನು ಅತ್ಯಂತ ಶಕ್ತಿಯುತವಾಗಿ ಜನರಿಗೆ ತಲುಪಿಸಿದೆ ಎಂದು ಪ್ರಶಂಸಿಸಿದರು. ಕಲೆಯ ಮೂಲಕ ಸಾಮಾಜಿಕ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಇಂತಹ ಪ್ರಯತ್ನಗಳು ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗುತ್ತವೆ ಎಂದರು. ರಾಜ್ಯ ಸರ್ಕಾರ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಉತ್ತೇಜಿಸುವ ದಿಶೆಯಲ್ಲಿ ಸದಾ ಬದ್ಧವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರು ಹಾಗೂ ಬೀಳಗಿ ಶಾಸಕ ಜೆ.ಟಿ. ಪಾಟೀಲ್, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಅಪರ ಜಿಲ್ಲಾಧಿಕಾರಿ ಅಶೋಕ್ ತೇಲಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಸೇರಿದಂತೆ ಜಿಲ್ಲಾಡಳಿತದ ಹಲವು ಅಧಿಕಾರಿಗಳು, ಕಲಾವಿದರು, ಸಾಂಸ್ಕೃತಿಕ ಸಂಘಟಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.
#ಉಮಾಶ್ರೀ #ಶ್ರಮಿಸ್ಟೇ #ಬಾದಾಮಿ #ಬನಶಂಕರಿಜಾತ್ರೆ #ಸಾಂಸ್ಕೃತಿಕಕಾರ್ಯಕ್ರಮ #ಕನ್ನಡನಾಟಕ #ಮಹಿಳಾಸಶಕ್ತೀಕರಣ #ಕಲೆಸಂಸ್ಕೃತಿ #ಆರ್ಬಿತಿಮ್ಮಾಪೂರ #ಬಾಗಲಕೋಟೆ


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ