ಮಹಾಲಿಂಗಪುರ : ಅಕ್ಕಿ ತುಂಬಿದ ಲಾರಿಯನ್ನು ಅಪಹರಿಸಿ, ಅಕ್ಕಿಮಾರಾಟ ಮಾಡಿದ್ದ 8 ಜನ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಎರಡು ಹಂತದಲ್ಲಿ ಬಂಧಿತರನ್ನು ವಶಕ್ಕೆ ಪಡೆದಿರುವ ಪೊಲೀಸರು ಜ.21ರಂದು ಜಮಖಂಡಿಯ ಸಂಜು ವಿಠ್ಠಲ ಕಡಕೋಳ(28), ಮೈಗೂರಿನ ಸಂಗಮೇಶ ಅರ್ಜುನ ಕಾಂಬಳೆ(39), ಜಮಖಂಡಿಯ ರುದ್ರಸ್ವಾಮಿ ಪೇಠದ ವಿಶ್ವನಾಥ(ಬುಲ್ಲಿ) ಪ್ರಭುಲಿಂಗ ಲಗಳಿ(29), ಸಂತೋಷ ಯಮನಪ್ಪ ಕಾಂಬಳೆ(31) ಅವರನ್ನು ಇನ್ನೋವಾ ವಾಹನ ಹಾಗೂ ನಗದು 90 ಸಾವಿರ ಹಣ ಸಹಿತ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು.
ಜ.24ರಂದು ವಿಜಯಪುರ ಜಿಲ್ಲೆಯ ನಿವಾಸಿಗಳಾದ ಜಾಕೀರಹುಸೇನ ಅಬ್ದುಲ್ ಘಪುರಶಾ ಮಕಾಂದಾರ(26), ಫಯಾಜ ಕರೀಮಶಾ ಮಕಾಂದಾರ(23), ಸಚೀನ ಅಶೋಕ ನಾಯಿಕೋಡಿ(25), ಅರ್ಪಾತ ಫಾರುಖಹ್ಮದ ತಾಳಿಕೋಟಿ(22) ಅವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೋ ಸಹಿತ ನಗದು 3 ಲಕ್ಷ ಹಣವನ್ನು ವಶಪಡಿಸಕೊಂಡಿದ್ದಾರೆ.
ಪ್ರಕರಣದಲ್ಲಿ ಒಟ್ಟು 3.90 ಲಕ್ಷ ನಗದು, ಇನ್ನೋವಾ, ಸ್ಕಾರ್ಪಿಯೋ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಪರಾರಿಯಾದ ಇಬ್ಬರು ದರೋಡೆಕೋರರ ಬಂಧನಕ್ಕಾಗಿ ಪೊಲೀಸರು ಬಲೆ ಬಿಸಿದ್ದಾರೆ.
*ಪ್ರಕರಣ ಬೇಧಿಸಿದ ಸ್ಥಳೀಯ ಪೋಲಿಸರು:*
ಬಾಗಲಕೋಟೆ ಎಸ್‌ಪಿ ಸಿದ್ದಾರ್ಥ ಗೋಯೆಲ್, ಹೆಚ್ಚುವರಿ ಎಸ್‌ಪಿ ಪ್ರಸನ್ನಕುಮಾರ್ ದೇಸಾಯಿ, ಜಮಖಂಡಿ ಡಿವೈಎಸ್‌ಪಿ ರೋಷನ್ ಜಮೀರ್ ಎಸ್ ಮಾರ್ಗದರ್ಶನದಲ್ಲಿ ಬನಹಟ್ಟಿ ಸಿಪಿಆಯ್ ಎಚ್.ಆರ್. ಪಾಟೀಲ, ಮಹಾಲಿಂಗಪುರ ಎಸೈ ಕಿರಣ ಸತ್ತಿಗೇರಿ, ತೇರದಾಳ ಎಸೈ ಶಿವಾನಂದ ಸಿಂಗನ್ನವರ, ಪೊಲೀಸ್ ಸಿಬ್ಬಂದಿ ಬಿ.ಜಿ.ದೇಸಾಯಿ, ಎ.ಎಂ.ಜಮಖಂಡಿ, ಬಸವರಾಜ ಮುದಿಬಸನಗೌಡ, ಎಸ್.ಡಿ.ಬಾರಿಗಿಡದ, ಅಶೋಕ ಸವದಿ, ಐ.ಬಿ.ತೇಲಿ, ಜೆ.ಸಿ.ದಳವಾಯಿ, ಚಂದ್ರಶೇಖರ ಜಟ್ಟೆಪ್ಪಗೋಳ, ಕೆ.ಎನ್.ಲಮಾಣಿ, ಐ.ಎಸ್.ಇಂಗಳಗಾಂವಿ, ವಿಠ್ಠಲ ಮಾನೆ, ವಿಠ್ಠಲ ಬಳಗನ್ನವರ ಒಳಗೊಂಡ ತಂಡವು 7 ದಿನಗಳಲ್ಲಿ ಪ್ರಕರಣವನ್ನು ಬೇಧಿಸಿ ದರೋಡೆಕೋರನ್ನು ಬಂಧಿಸಿದ್ದಕ್ಕಾಗಿ ಬಾಗಲಕೋಟೆ ಜಿಲ್ಲಾ ಎಸ್‌ಪಿ ಸಿದ್ದಾರ್ಥ ಗೋಯಲ್ ಅವರು ತನಿಖಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಕ್ತಬಹುಮಾನ ಘೋಷಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ