ಬಾಗಲಕೋಟೆ:ಬಸವೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ 2025–26ನೇ ಶೈಕ್ಷಣಿಕ ಸಾಲಿನ “ನಿತ್ಯೋತ್ಸವ” ವಾರ್ಷಿಕ ಸಂಚಿಕೆ ಬಿಡುಗಡೆ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಾನಗಲ್ ಕುಮಾರೇಶ್ವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಂದಿ ಬದಲಾವಣೆ ಶಸ್ತ್ರಚಿಕಿತ್ಸಕರಾದ ಡಾ. ಬಸವರಾಜ ದಡ್ಡೆನ್ನವರ,
“ಜ್ಞಾನವೇ ವಿದ್ಯಾರ್ಥಿಗಳ ಯಶಸ್ಸಿನ ಅಂತಿಮ ಸಾಧನ. ಪಿಯುಸಿ ಹಂತದಲ್ಲಿ ಪಡೆಯುವ ಜ್ಞಾನ ಹಾಗೂ ಶ್ರಮವೇ ಭವಿಷ್ಯದ ಬಲವಾದ ಅಡಿಪಾಯ” ಎಂದು ಹೇಳಿದರು.
ಒತ್ತಡಗಳು ಹಾಗೂ ಸವಾಲುಗಳು ಜೀವನದ ಭಾಗವೇ ಆದರೂ, ಆತ್ಮವಿಶ್ವಾಸ ಮತ್ತು ಶ್ರಮ ಇದ್ದರೆ ಯಶಸ್ಸಿನ ದಾರಿ ಸುಗಮವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿನಿ ಹಾಗೂ ಚಲನಚಿತ್ರ ನಟಿ ದೃತಿ ಹರಧಿ ಮಾತನಾಡಿ,“ಬಸವೇಶ್ವರ ಕಾಲೇಜಿನ ವಿದ್ಯಾರ್ಥಿನಿಯಾಗಿರುವುದು ನನಗೆ ಹೆಮ್ಮೆ. ನನ್ನ ಸಾಧನೆಗೆ ಇಲ್ಲಿ ಪಡೆದ ಶಿಕ್ಷಣ ಹಾಗೂ ಶಿಕ್ಷಕರ ಮಾರ್ಗದರ್ಶನವೇ ಪ್ರಮುಖ ಕಾರಣ. ಮೊದಲು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ನಂತರ ನಟನಾ ಕ್ಷೇತ್ರದಲ್ಲಿ ಸಾಧನೆ ಮಾಡುವ ನಿರ್ಧಾರ ನನ್ನನ್ನು ಯಶಸ್ಸಿನ ದಾರಿಯಲ್ಲಿ ಮುನ್ನಡೆಸಿತು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಬಾವಿ ಮಾತನಾಡಿ,ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯ ಮತ್ತು ನವಜ್ಞಾನಕ್ಕೆ ಹೆಚ್ಚಿನ ಮಹತ್ವವಿದೆ. ವಿದ್ಯಾರ್ಥಿಗಳು ದೇಶದ ಉತ್ತಮ ನಾಗರಿಕರಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ “ನಿತ್ಯೋತ್ಸವ” ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣಿತ ವಿಭಾಗದ ಮುಖ್ಯಸ್ಥ ಸಿದ್ದನಗೌಡ ಪಾಟೀಲ ಹಾಗೂ ಜೀವಶಾಸ್ತ್ರ ಉಪನ್ಯಾಸಕಿ ಶ್ವೇತಾ ರೇವಡಗುಂದಿ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಹೆಚ್. ಬೇವಿನಹಳ್ಳಿ ಸ್ವಾಗತಿಸಿದರು.ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಎ.ಡಿ. ಮೊಮಿನ್, ದೈಹಿಕ ನಿರ್ದೇಶಕ ಎಸ್.ಎಸ್. ಮಂಕಣಿ, ಆರ್.ಆರ್. ರಡ್ಡೇರ, ಡಾ. ಸುಭಾಸ್ ತಿಪ್ಪಣ್ಣವರ, ಜಿ.ಎಸ್. ಜಿಗಳೂರ, ವಿದ್ಯಾ ಹಿರೇಮಠ ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
#BasaveshwarPUCollege #Nityotsava2025 #BagalkotNewsP #UCollegeEvents #StudentSuccess#KannadaEducation#DrBasavarajDaddenavar#DhrutiHaradhi#CollegeFest#EducationNews

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ