ಸರಕಾರಿ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ

ಬಾದಾಮಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಘಟಕದ ತಿಯಿಂದ  ಶಾಸಕ ಭೀಮಸೇನ ಬಿ ಚಿಮ್ಮನಕಟ್ಟಿ ಇವರಿಗೆ 2026 ಹೊಸ ವರ್ಷದ ಶುಭಾಶಯಗಳನ್ನು ಕೋರುವ ಜೊತೆಗೆ  ಬಾಗಲಕೋಟೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜ.9 ಮತ್ತು 10 ರಂದು ಎರಡು ದಿನಗಳ ಕಾಲ ನಡೆಯಲಿರುವ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಆಮಂತ್ರಿಸಲಾಯಿತು. 

Petkarmedia:ನೌಕರರ ಸಂಘದ 2026 ಸಾಲಿನ ನೂತನ ವರ್ಷದ ಕ್ಯಾಲೆಂಡರ್ ನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಬಿಡುಗಡೆಗೊಳಿಸಿದರು. 

    ಇದೇ ಸಂದರ್ಭದಲ್ಲಿ ನೌಕರರ ಸಂಘದ 2026 ಸಾಲಿನ ನೂತನ ವರ್ಷದ ಕ್ಯಾಲೆಂಡರ್ ನ್ನು ಶಾಸಕರು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಶಾಸಕ ಭೀಮಸೇನ ಚಿಮ್ಮನಕಟ್ಟಿ 2026 ಹೊಸ ಸಂವತ್ಸರ ಎಲ್ಲಾ ನೌಕರ ಬಾಂಧವರಿಗೆ ಒಳ್ಳೆಯದಾಗಲೆಂದು ಆಶಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಡಾ.ಎಂ.ಎನ್.ಸಿದ್ದಲಿಂಗಪ್ಪನವರ, ಕಾರ್ಯದರ್ಶಿ ಆರ್. ಟಿ. ಪಟ್ಟಣಶೆಟ್ಟಿ, ರಾಜ್ಯ ಪರಿಷತ್ ಸದಸ್ಯ ಅವಿನಾಶ ಮೇಟಿ, ಖಜಾಂಚಿ ವಿ.ಎಚ್.ಜಾದವ್, ಉಪಾಧ್ಯಕ್ಷ ಸುಭಾಷ್ ಚಂದ್ರ ಅವರಾದಿ, ಗೌರವಾಧ್ಯಕ್ಷ ಸಿ.ಆರ್.ಸಾರಂಗಮಠ, ತಾ.ಪಂ.ಇಒ   ಹಾಗೂ ನಿರ್ದೇಶಕ ಸತೀಶ್ ಮಾಕೊಂಡ, ಉಜ್ವಲ್ ಬಸರಿ, ಸುಧೀರ ತೊರವಿ, ಎಚ್.ಡಿ.ಮುದರಡ್ಡಿ, ಶ್ರೀಕಾಂತ್ ಕೊರತಗೇರಿ, ವಿ.ಎ.ಪಾಟೀಲ,  ಪಿ.ಹೆಚ್.ಮಹಾಲಿಂಗಪುರ, ಪ್ರೊ. ಎಸ್.ಬಿ.ರಾಯನಗೌಡರ, ಪ್ರೊ.ಗೋವರ್ಧನ್ ಪಿ.ಬಿ. ಸೇರಿದಂತೆ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.


Petkarmedia: ಸ್ಥಳೀಯ ಸುದ್ದಿಗಳಿಗಾಗಿ ನೋಡಿ.

ಕಾಮೆಂಟ್‌ಗಳು