ಬಾದಾಮಿ: ಸಚಿವ ಆರ್.ಬಿ. ತಿಮ್ಮಾಪುರ್ ಹಾಗೂ ಅವರ ಪುತ್ರನ ವಿರುದ್ಧ ಸಿಎಂ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಸಚಿವರು ಬಾದಾಮಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕೆ.ಆರ್.ಪೇಟೆ ಶಾಸಕ ಹೆಚ್.ಟಿ. ಮಂಜು ನೀಡಿರುವ ದೂರು ಕುರಿತು ಮಾತನಾಡಿದ ಸಚಿವರು,“ಅದು ಹಳೆಯ ಕೇಸ್. ಆ ದೂರು ಕೊಟ್ಟವನು ನಂತರ ನಾಪತ್ತೆಯಾಗಿದ್ದಾನೆ. ಈಗ ತನಿಖೆ ಮಾಡೋಣ ಅಂತಿದ್ದಾರೆ. ಯಾವ ತನಿಖೆ ಆಗಲೀ ಮಾಡಲಿ, ನಾವು ಸಿದ್ಧ” ಎಂದರು.
ಲಂಚಾವತಾರ ಪ್ರಕರಣದಲ್ಲಿ ತಮ್ಮ ಪಾತ್ರವಿದೆಯೇ? ಎಂಬ ಪ್ರಶ್ನೆಗೆ“ನೋ ಕನ್ಸರ್ನ್. ಆ ಫೈಲ್ ನನಗೆ ಬರೋದಿಲ್ಲ. ನಾನು ಸೈನ್ ಮಾಡುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳ ಮಟ್ಟದಲ್ಲೇ ಪರವಾನಗಿ ನೀಡಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ಇನ್ನೂ,ಕೆಲವು ವರ್ಗಾವಣೆ ಮಾಡಿದ್ದೇವೆ, ಕೆಲವರ ಮೇಲೆ ಕ್ರಮ ಕೈಗೊಂಡಿದ್ದೇವೆ. ಲಾಗಿನ್‌ಗಳನ್ನು ಬಂದ್ ಮಾಡಲಾಗಿದೆ. ಈಗ ಕೌನ್ಸೆಲಿಂಗ್ ವ್ಯವಸ್ಥೆ ತಂದಿದ್ದೇವೆ. ಇವುಗಳ ನಡುವೆಯೇ ಎಲ್ಲೋ ಏನೋ ಆಗಿರಬಹುದು, ನೋಡೋಣ. ನನ್ನದು ಇದ್ರಲ್ಲಿ ಯಾವುದೇ ತಪ್ಪಿಲ್ಲ” ಎಂದರು.
🔹 ರಾಜೀನಾಮೆ ಒತ್ತಾಯಕ್ಕೆ ತೀಕ್ಷ್ಣ ಉತ್ತರ
ಬಿಜೆಪಿ ನಾಯಕರಿಂದ ರಾಜೀನಾಮೆ ಆಗ್ರಹ ಕುರಿತು ಪ್ರತಿಕ್ರಿಯಿಸಿದ ತಿಮ್ಮಾಪುರ್,“ಏನು ರಾಜೀನಾಮೆ ಕೊಡೋದು? ಅವರ ಮೇಲೆ ಆರೋಪ ಬಂದಾಗ ಅವರು ರಾಜೀನಾಮೆ ಕೊಟ್ಟಿದ್ರಾ? ಲಿಸ್ಟ್ ಕೊಡಲಾ? ಆರೋಪ ಪ್ರೂವ್ ಆದ್ರೆ ಒಂದು ಕ್ಷಣ ರಾಜಕಾರಣದಲ್ಲಿ ಇರೋದಿಲ್ಲ” ಎಂದು ಸವಾಲು ಹಾಕಿದರು.
🔹 ಆಡಿಯೋದಲ್ಲಿ ಹೆಸರು ಕೇಳಿಬಂದಿರುವ ಆರೋಪ
ಆಡಿಯೋದಲ್ಲಿ ಸಚಿವ ಹಾಗೂ ಪುತ್ರನ ಹೆಸರು ಇದೆ ಎಂಬ ಆರೋಪಗಳ ಬಗ್ಗೆ,“ಹೆಸರು ದುರುಪಯೋಗ ಮಾಡಿಕೊಳ್ಳುವ ಅಧಿಕಾರಿಗಳು ಹಲವು ಇಲಾಖೆಗಳಲ್ಲಿದ್ದಾರೆ. ನಮ್ಮ ಇಲಾಖೆಯಲ್ಲೂ ಆಗಿದೆ. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನನ್ನ ಮಗನ ಹೆಸರು ಕೇಳಿಬಂದಿದೆ ಅನ್ನೋದು ದುರುದ್ದೇಶ. ಯಾವುದೇ ಆಡಿಯೋ ಇದೆ ಅಂತ ನನಗೆ ಮಾಹಿತಿ ಇಲ್ಲ” ಎಂದರು.
“ಯಾವನೋ ಒಬ್ಬ ಆಡಿಯೋದಲ್ಲಿ ಮಾತನಾಡಿದ ಅಂದ್ರೆ, ಅವನ ಮಗ, ಇವನ ಮಗ ಅಂತ ಹೇಳೋದು ವಾಸ್ತವವೇ? ರಿಪೋರ್ಟ್ ಬರಲಿ. ಅಧಿಕಾರ ಯಾರಿಗೂ ಶಾಶ್ವತವಲ್ಲ” ಎಂದು ಹೇಳಿದರು.
“ಗಾಳಿಯಲ್ಲಿ ಗುಂಡು ಹೊಡೆದು ತೇಜೋವಧೆ ಮಾಡೋ ಪ್ರಯತ್ನ ನಡೆದರೂ ಅದು ಸಾಧ್ಯವಿಲ್ಲ. ಐ ಆಮ್ ಡಿಫರೆಂಟ್. ಇದು ರಾಜಕಾರಣದಲ್ಲಿ ಸಾಮಾನ್ಯ” ಎಂದು ತಿಮ್ಮಾಪುರ್ ಹೇಳಿದರು.
#BagalkotBreaking#Badami#ExciseDepartment#RBThimmapur
#Lokayukta
#BriberyCase
#PoliticalRow
#KarnatakaPolitics
#SOENews
#Petkarmedia

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ