ಬಾಗಲಕೋಟೆ: ಮಲ್ಲಯ್ಯನ ಗುಡ್ಡದಲ್ಲಿ ಸಸಿ ನೆಡುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಚಾಲನೆ

ಬಾಗಲಕೋಟೆ : ತಾಲೂಕಿನ ಹಳೆ ಮಲ್ಲಾಪೂರ ಗ್ರಾಮದಲ್ಲಿರುವ ಮಲ್ಲಯ್ಯನ ಗುಡ್ಡದಲ್ಲಿ ೨ ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಬುಧವಾರ ಚಾಲನೆ ನೀಡಿದರು.

Petkarmedia:ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಅರಣ್ಯ ಇಲಾಖೆ ಹಾಗೂ ನಾಗರಾಳ-ನಾಯನೇಗಲಿ ಇಐಡಿ ಪ್ಯಾರಿ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಮಲ್ಲಯ್ಯನ ಗುಡ್ಡದಲ್ಲಿ ವಿವಿಧ ಜಾತಿಯ ಒಟ್ಟು ೨ ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಗುಡ್ಡದ ಪ್ರದೇಶಗಳಲ್ಲಿ ಸಸಿ ನೆಡುವುದರಿಂದ ಮಣ್ಣು ಕೊಚ್ಚುವಿಕೆಯನ್ನು ತಡೆಯಬಹುದಾಗಿದೆ. ಜಲಸಂಪನ್ಮೂಲ ಸಂರಕ್ಷಣೆ ಹಾಗೂ ಹವಾಮಾನ ಸಮತೋಲನಕ್ಕೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಹಸಿರು ಪರಿಸರ ನಿರ್ಮಾಣದತ್ತ ಜಿಲ್ಲಾಡಳಿತ ಮುಂದಾಗಿದ್ದು, ಜಿಲ್ಲೆಯಲ್ಲಿರುವ ಪ್ರತಿಯೊಂದ ಶುರ‍್ಸ್ ಕಾರ್ಖಾನೆಗಳ ಸಿಎಸ್‌ಆರ್ ಅನುದಾನಡಿಯಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಿಗಧಿಪಡಿಸಿದ ಸ್ಥಳಗಳಲ್ಲಿ ಗಿಡ, ಮರಗಳನ್ನು ಬೆಳೆಸಲು ಎಲ್ಲ ಕಾರ್ಖಾನೆಗಳಿಗೆ ತಿಳಿಸಲಾಗಿತ್ತು. ಅದರಂತೆ ನಾಗರಾಳ-ನಾಯನೇಗಲಿ ಇಐಡಿ ಪ್ಯಾರಿ ಶುರ‍್ಸ್ ಇಂಡಿಯಾ ಲಿಮಿಟೆಡ್‌ನವರು ಬಾಗಲಕೋಟೆ ತಾಲೂಕಿನ ಮಲ್ಲಯ್ಯನ ಗುಡ್ಡದಲ್ಲಿ ಸಸಿ ನೆಡುವ ಕಾರ್ಯಕ್ಕೆ ಮುಂದಾಗಿರುವುದು ಸಂತೋಷದ ವಿಷಯವಾಗಿದೆ ಎಂದರು.

ಇದೇ ರೀತಿಯ ಅರಣ್ಯ ಇಲಾಖೆ ಹಾಗೂ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ಮೆಲ್‌ಬ್ರೋ ಶುರ‍್ಸ್ನವರಿಗೆ ಮುಚಖಂಡಿ ಕೆರೆ ಆವರಣ, ಬಾಡಗಂಡಿಯಲ್ಲಿರುವ ಬೀಳಗಿ ಶುರ‍್ಸ್ನವರಿಗೆ ಬಾಡಗಂಡಿ ಮತ್ತು ಚಿಕ್ಕಸಂಗಮ, ಜೆಮ್ಸ್ ಶುರ‍್ಸ್ದವರಿಗೆ ಸುನಗ ಮತ್ತು ವಾರಿ ಮಲ್ಲಯ್ಯನಗುಡ್ಡ, ಬಾದಾಮಿ ಶುರ‍್ಸ್ಗೆ ಬಾದಾಮಿ ಗುಹೆಯ ಹತ್ತಿರ, ಕೇದಾರನಾಥ ಶುರ‍್ಸ್ಗೆ ಲಿಂಗಾಪೂರದಲ್ಲಿ ಸಸಿ ನೆಡಲು ಸ್ಥಳ ಗುರುತಿಸಲಾಗಿದೆ ಎಂದು ತಿಳಿಸಿದರು.

ಕೇನ್ ಫವರ್ ಲಿಮಿಟೆಡ್‌ಗೆ ಕುಳಗೇರಿ ಕ್ರಾಸ್, ನಿರಾಣಿ ಶುರ‍್ಸ್ಗೆ ಮುಧೋಳ, ಇಂಡಿಯನ್ ಕೇನ್ ಪಾವರ್‌ಗೆ ಉತ್ತೂರು, ರೈತರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮುದ್ದಾಪೂರ, ಜಮಖಂಡಿ ಶುರ‍್ಸ್ಗೆ ಸಾವಳಗಿ, ಖಾಜಿಬೀಳಗಿ, ಪ್ರಭುಲಿಂಗೇಶ್ವರ ಶುರ‍್ಸ್ಗೆ ಸಿದ್ದಾಪೂರ, ಕುಳಲಿ, ಗೋದಾವರಿ ಶುರ‍್ಸ್ಗೆ ತೇರದಾಳ ಮತ್ತು ಬೆಳಗಲಿ ಗುಡ್ಡ ಹಾಗೂ ಸಾಯಿಪ್ರೀಯಾ ಶುರ‍್ಸ್ಗೆ ಮರೆಗುಡ್ಡಿ ಗ್ರಾಮದಲ್ಲಿ ಸಸಿಗಳನ್ನು ನೆಡಲಿದ್ದಾರೆಂದು ತಿಳಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ ಸಿಇಓ ಅವರು ಮಲ್ಲಯ್ಯನ ಗುಡ್ಡದ ಹತ್ತಿರ ಆಲಮಟ್ಟಿ ಹಿನ್ನೀರು ಇರುವದರಿಂದ ಸುಂದರವಾದ ಗಾರ್ಡನ್ ಮಾಡಲು ಅವಕಾಶವಿದೆ. ಈ ಗುಡ್ಡದಲ್ಲಿ ಮಲ್ಲಿಕಾರ್ಜುನ ದೇವಸ್ಥಾನವಿದ್ದು, ಸುತ್ತಲೂ ಪರಿಸರ ಬೆಳೆಸಿ, ಹಸರೀಕರಣಕ್ಕಾಗಿ ಕ್ರಮಕೈಗೊಂಡರೆ ಸುಂದರವಾದ ವಾತಾವರಣ ಸೃಷ್ಠಿಯಾಗುತ್ತದೆ. ಇದರಿಂದ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ ಎಂದು ತಿಳಿಸಿದರು. 

ಪ್ರಾರಂಭದಲ್ಲಿ ಮಲ್ಲಯ್ಯನ ಗುಡ್ಡದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳಿ ದರ್ಶನ ಒಡೆಯಲಾಯಿತು. ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹಿರೆ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ರೂಪಾ ಡಿ, ಎ.ಐ.ಡಿ ಪ್ಯಾರಿ ಇಂಡಿಯಾ ಲಿಮಿಟೆಡ್‌ನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ಸುತ್ತಮುತ್ತಲಿನ ಗ್ರಾಮ, ನಗರದ ಪ್ರಮುಖರಾದ ಮಲ್ಲಿಕಾರ್ಜುನ ಮೇಟಿ, ಶ್ರೀನಿವಾಸ ಬಳ್ಳಾರಿ, ನಾಗರಾಜ ಹದ್ಲಿ, ಡಾ.ಶೇಖರ ಮಾನೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು