ಬಾಗಲಕೋಟೆ:ನಗರದ ಕಲಾಭವನದಲ್ಲಿ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ 6ನೇ “ಕಾಳಿದಾಸ ಹಬ್ಬ” ವಾರ್ಷಿಕ ಸಮಾರಂಭ ವಿಜೃಂಭಣೆಯಿಂದ ಜರುಗಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಂಗಪ್ಪ ಅವರು, “ನಮ್ಮ ಜೀವನದಲ್ಲಿ ಒಳ್ಳೆಯ ಮನುಷ್ಯನಾಗುವುದೇ ಅತಿ ದೊಡ್ಡ ಸಾಧನೆ. ಜ್ಞಾನ, ಮೌಲ್ಯಗಳು ಮತ್ತು ಮಾನವೀಯತೆಯೇ ಸಮಾಜದ ನಿಜವಾದ ಬಲ” ಎಂದು ಹೇಳಿದರು.
ಶಿಕ್ಷಕರ ಪಾತ್ರದ ಕುರಿತು ಮಾತನಾಡಿದ ಅವರು, “ಶಿಕ್ಷಕರೇ ಸಮಾಜದ ಶಿಲ್ಪಿಗಳು. ಮುಂದಿನ ಪೀಳಿಗೆಯನ್ನು ರೂಪಿಸುವ ಮಹತ್ತರ ಜವಾಬ್ದಾರಿ ಅವರ ಮೇಲಿದೆ” ಎಂದು ತಿಳಿಸಿದರು. ಶಿಕ್ಷಣದಿಂದ ಸಮಾನತೆ, ಮಾನವೀಯತೆ ಹಾಗೂ ಶಿಸ್ತಿನ ಮೌಲ್ಯಗಳು ಬೆಳೆದು ಬರುತ್ತವೆ ಎಂಬುದನ್ನು ಕನಕದಾಸರು ಪ್ರತಿಪಾದಿಸಿದ್ದನ್ನು ಸ್ಮರಿಸಿದರು. ಕಾಳಿದಾಸ ಶಿಕ್ಷಣ ಸಂಸ್ಥೆಯ ಸರ್ವಧರ್ಮೀಯ, ಸೇವಾಮನೋಭಾವದ ಕಾರ್ಯವೈಖರಿ ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಮಾತನಾಡಿ, ಇಂದಿನ ಶಿಕ್ಷಣವು ಪುಸ್ತಕಗಳಿಗೆ ಸೀಮಿತವಾಗದೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಬೇಕು. ಕ್ರೀಡೆ, ಸಾಹಿತ್ಯ, ಕಲೆ ಸೇರಿದಂತೆ ಮಕ್ಕಳ ಆಸಕ್ತಿಗೆ ಪಾಲಕರು ಬೆಂಬಲ ನೀಡಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಮಾತನಾಡಿ, “ಸಾಧನೆಯೇ ಯುವಕರ ಆಸ್ತಿ. ಕಾಳಿದಾಸರ ಹೆಸರಿನ ಈ ಸಂಸ್ಥೆ ಸಮಾಜಮುಖಿ ಹಾಗೂ ಸಂಸ್ಕಾರಾಧಾರಿತ ಶಿಕ್ಷಣ ನೀಡುತ್ತಿದೆ” ಎಂದು ಪ್ರಶಂಸಿಸಿದರು. ಶಿಕ್ಷಣದ ಜೊತೆ ಸಂಸ್ಕಾರವೂ ಮುಖ್ಯವೆಂದು ಹೇಳಿದರು.
ಈ ಸಂದರ್ಭದಲ್ಲಿ ಕುಸ್ತಿ, ಸೈಕ್ಲಿಂಗ್ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಲ್ಲಗಂಬ ಪ್ರದರ್ಶನ ವಿಶೇಷ ಆಕರ್ಷಣೆಯಾಗಿ ಮೂಡಿಬಂತು.
ಕಾರ್ಯಕ್ರಮದಲ್ಲಿ ಶಿರೂರಿನ ಕನಕಬ್ರಹ್ಮ ವಿದ್ಯಾಶ್ರಮದ ಚಿನ್ಮಯಾನಂದ ಸ್ವಾಮೀಜಿ, ಡಿಡಿಪಿಯು ಪುಂಡಲಿಕ ಕಾಂಬಳೆ, ಮುದ್ದೇಬಿಹಾಳ ಎಸ್‌ಜಿಎಂಕೆ ಪಿಯು ಕಾಲೇಜಿನ ಪ್ರಾಂಶುಪಾಲ ಎಸ್.ಕೆ. ಹರನಾಳ, ಕಾಳಿದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಸ್. ಪಾಟೀಲ್, ಕಾರ್ಯದರ್ಶಿ ಟಿ.ಬಿ. ಕುರುಬರ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
🏷️ #KalidasHabba #KalidasEducation #BagalkotNews #EducationWithValues #GoodHuman #StudentAchievement #CulturalProgram


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ