ಬೀಳಗಿ: ರೊಳ್ಳಿ–ಮನ್ನಿಕೇರಿ ಏತ ನೀರಾವರಿ ಯೋಜನೆಯ ಜಾಕವೇಲ್ ಪೈಪ್‌ಲೈನ್ ಒಡೆದು, ಇಡೀ ರಾತ್ರಿ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಗ್ರಾಮಸ್ಥರು ಭಾರೀ ತೊಂದರೆ ಅನುಭವಿಸಿದರು. ಮನೆಗೆ ನುಗ್ಗಿದ ನೀರನ್ನು ಹೊರಗೆ ತಳ್ಳಲು ಜನರು ಹೈರಾಣಾಗಿದ್ದರು.
Petkarmedia:ರೊಳ್ಳಿ ಗ್ರಾಮದಲ್ಲಿ ನೀರು ಮನೆಗೆ ನುಗ್ಗಿರುವುದು.
ಹೊಸ ರೊಳ್ಳಿ ಗ್ರಾಮದ ಅರ್ಜುನಪ್ಪ ಸಂಶಿ ಹಾಗೂ ಲಕ್ಷ್ಮಣ ಸೋಕನದಾಗಿ ಅವರ ಮನೆಗಳಿಗೆ ನೀರು ನುಗ್ಗಿ, ಮನೆಯೊಳಗೆ ಸಂಗ್ರಹಿಸಿದ್ದ ದವಸ–ಧಾನ್ಯಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಅಕಸ್ಮಾತ್ ಸಂಭವಿಸಿದ ಈ ಅವಘಡದಿಂದ ಗ್ರಾಮದಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ.
ಪೈಪ್‌ಲೈನ್ ದುರಸ್ತಿ ಕಾರ್ಯವನ್ನು ತಕ್ಷಣ ಕೈಗೊಳ್ಳಬೇಕು ಹಾಗೂ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Petkarmedia:ಸ್ಥಳೀಯ ಸುದ್ದಿಗಳಿಗಾಗಿ ನೋಡಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ