ಬಾಗಲಕೋಟೆ : ಯಾವುದೇ ಒಬ್ಬ ವ್ಯಕ್ತಿ, ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಿ ಬೆಳೆಯಲು ಅಥವಾ ಸಾಧನೆ ಮಾಡಲು ನಮ್ಮಲ್ಲಿ ದೊಡ್ಡತನದ ಮನಸ್ಸು ಇರಬೇಕು. ಜತೆಗೆ ಕಠೀಣ ಪರಿಶ್ರಮಪಡಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ನವನಗರದ ಯೂನಿಟ್-2ರಲ್ಲಿರುವ ಹೊಳೆಹುಚ್ಚೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶ್ರೀಜಿತ್ ಇಂಟರ್‌ನ್ಯಾಶನಲ್ ಸ್ಕೂಲ್ ಕಲಾಂಜಲಿ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರಮ ಇಲ್ಲದೇ ಸಾಧನೆ ಸಾಧ್ಯವಿಲ್ಲ. ಪಾಲಕರು, ಮಕ್ಕಳೊಂದಿ ಸ್ನೇಹಮಯಿಯಾಗಿರಬೇಕು. ಆಗ ಅವರ ಕಷ್ಟ-ನೋವುಗಳನ್ನು ಪಾಲಕರೊಂದಿಗೆ ಹಚ್ಚಿಕೊಳ್ಳುತ್ತಾರೆ. ಅವರೊಂದಿಗೆ ಶಿಸ್ತಿನೊಂದು ಸ್ನೇಹಪರವಾಗಿದ್ದರೆ, ಮಕ್ಕಳ ಮನಸ್ಸು ಅರಿಯಲೂ ಸಹಕಾರಿಯಾಗುತ್ತದೆ ಎಂದರು.
ವಿದ್ಯಾರ್ಥಿಗಳಿಗೆ, ಅಂಕಗಳೊಂದಿಗೆ ಉತ್ತಮ ಮೌಲ್ಯ ಕಲಿಸಬೇಕು, ಕಲೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ನಲಿ-ಕಲಿ ಎಂಬ ಕಾರ್ಯಕ್ರಮವಿದ್ದು, ಇದನ್ನು ಖಾಸಗಿ ಶಾಲೆಗಳೂ ಅಳವಡಿಸಿಕೊಳ್ಳಬೇಕು, ಮಕ್ಕಳು, ತಮಗೆ ಯಾವುದೇ ಕಷ್ಟ ಬಂದರೆ, ಎದೆಗುಂದದೇ ಎದುರಿಸಬೇಕು, ಮೊಬೈಲ್‌ದಿಂದ ದೂರ ಇರಬೇಕು, ಮೊಬೈಲ್ ಅತಿಹೆಚ್ಚು ಬಳಕೆಯಿಂದ ಮಾನಸಿಕ ಆರೋಗ್ಯ ಹಾಳಾಗುತ್ತದೆ ಎಂದು ಹೇಳಿದರು.
ಎಐ ಬಳಕೆ-ಉದ್ಯೋಗಕ್ಕೆ ಹೊಡೆತ :
ಇಂದು ಎಲ್ಲ ರಂಗದಲ್ಲೂ ಎಐ ತಂತ್ರಜ್ಞಾನ ಬಳಕೆಯಾಗುತ್ತಿದೆ. ಮುಂದೆ ಕೆಲವೇ ವರ್ಷಳಲ್ಲಿ, ಇದು ಎಲ್ಲ ಕ್ಷೇತ್ರಕ್ಕೂ ಕಾಲಿಡಲಿದ್ದು, ಉದ್ಯೋಗ ಕಸಿದುಕೊಳ್ಳುವ ಸಂಭವವಿದೆ. ಹೀಗಾಗಿ ಎಐ ಬಳಕೆಯಿಂದ ಉದ್ಯೋಗ ಹೋದರೆ, ಅದಕ್ಕೆ ಪರ್ಯಾಯ ಸಿದ್ಧತೆಗೆ ಈಗಲೇ ಮಾನಸಿಕವಾಗಿ ಸಿದ್ಧರಾಗಬೇಕು ಎಂದು ತಿಳಿಸಿದರು.
ಯುವ ಮುಖಂಡ ಹೊಳಬಸು ಷ. ಶೆಟ್ಟರ ಅವರು, ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಸಾಧನೆ ಮಾಡಿದ್ದಾರೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಥೆ ಕಟ್ಟಿ ಬೆಳೆಸುತ್ತಿರುವುದು ಶ್ಲಾಘನೀಯ ಕಾರ್ಯ. ಸಂಸ್ಥೆ ಸ್ಥಾಪನೆ ಸುಲಭ, ಅದನ್ನು ಅತ್ಯಂತ ಶಿಸ್ತುಬದ್ಧ ಹಾಗೂ ಕಾರ್ಯಯೋಚಿತವಾಗಿ ಬೆಳೆಸುವುದು ಇಂದು ಕಷ್ಟಕರ. ಅದನ್ನು ಹೊಳಬಸು ಅವರು ಸುಂದರವಾಗಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಶೆಟ್ಟರ ಅವರು, ಶಾಸಕರಾಗಿದ್ದ ದಿ.ಎಚ್.ವೈ. ಮೇಟಿ ಅವರಿಗೆ ನಿಷ್ಠರಾಗಿದ್ದರು. ಮೇಟಿ ಅವರೂ, ಅತ್ಯತ್ತುಮ ರಾಜಕಾರಣಿಯಾಗಿದ್ದರು. ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು, ಎಂಜಿನೀಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ವಸತಿ ನಿಲಯ ಮಂಜೂರು ಮಾಡಿಸಿದ್ದರು. ಯಾವುದೇ ಕೆಲಸ ಇದ್ದರೂ, ಅತ್ಯಂತ ಸೌಮ್ಯದಿಂದ ಅಧಿಕಾರಿಗಳೊಂದಿಗೆ ವರ್ತಿಸುತ್ತಿದ್ದರು. ಅವರೊಂದಿಗೆ ಆರು ತಿಂಗಳ ಕಾಲ ಕೆಲಸ ಮಾಡಿದ್ದು, ಅತ್ಯುತ್ತಮ ಜನಪ್ರತಿನಿಧಿಯಾಗಿದ್ದರು ಎಂದು ಹೇಳಿದರು.
ಅಂಕಕ್ಕಿಂಗ-ಮೌಲ್ಯ ಮುಖ್ಯ :
ಖ್ಯಾತ ವೈದ್ಯ ಡಾ।ಸುಭಾಸ ಪಾಟೀಲ ಮಾತನಾಡಿ, ಮಕ್ಕಳಿಗೆ ಶಾಲಾ ಹಂತ ಅತ್ಯಂತ ಪ್ರಮುಖ ಘಟ್ಟ. ಅಂಕ ಮುಖ್ಯವಲ್ಲ. ಜೀವನದಲ್ಲಿ ಅಂತಿಮ ಗುರಿ ಮುಖ್ಯ. ಶಿಸ್ತು, ಗೌರವದೊಂದಿಗೆ ಯಸ್ಸಿಯನ ಸೂತ್ರಧಾರಿಗಳಾಗಬೇಕು. ಮಕ್ಕಳು, ದೊಡ್ಡ ಕನಸು ಕಂಡು, ಅದರ ಸಾಕಾರಕ್ಕೆ ಪ್ರಯತ್ನಿಸಬೇಕು. ಸೋಲಿಗೆ ಭಯಪಡಬಾರದು. ಸೋಲು, ಜೀವನದಲ್ಲಿ ಬರುವ ಒಂದು ಪಾಠ ಎಂದು ಪರಿಗಣಿಸಬೇಕು ಎಂದು ತಿಳಿಸಿದರು.
ಗಾಯತ್ರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಕಲಬುರಗಿ ಮಾತನಾಡಿ, ಈ ಸಂಸ್ಥೆಯ ಸಂಸ್ಥಾಪಕ ಹೊಳಬಸು ಶೆಟ್ಟರ, ನಾವೆಲ್ಲ ದಿ.ಎಚ್.ವೈ. ಮೇಟಿ ಅವರ ಬೆಂಬಲಿಗರು. ಶೆಟ್ಟರ ಅವರು, 4ನೇ ತಗರಗಿ ಓದುವಾಗಲೇ, ಮೇಟಿ ಅವರೊಂದಿಗೆ ಗುರುತಿಸಿಕೊಂಡು, ನಿಷ್ಠೆಯಿಂದ ಬೆಳೆದಿದ್ದಾರೆ. ಇವರ ಶಿಕ್ಷಣ ಸಂಸ್ಥೆಗಳು ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಹೊಳೆಹುಚ್ಚೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹೊಳಬಸು ಷ. ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಮೇಟಿ, ಬಿಟಿಡಿಎ ಮುಖ್ಯ ಎಂಜಿನೀಯರ್ ಚಂದ್ರಹಾಸ ಬಂಡಿ, ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್. ಸರಗಣಾಚಾರಿ, ವೀರೇಶ ಚಿಂದಿ, ಶಾಲೆಯ ಪ್ರಾಚಾರ್ಯರು, ಶಿಕ್ಷಕರು ಭಾಗವಹಿಸಿದ್ದರು.
ಬಳಿಕ ಶಾಲಾ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಗಮನ ಸೆಳೆದವು.
ಸ್ಥಳೀಯ ಸುದ್ದಿಗಳಿಗಾಗಿ Petkarmedia ಫಾಲೋ ಮಾಡಿ
#Bagalkote
#PetkarMedia
#ಶ್ರೀಜಿತ್_ಇಂಟರ್‌ನ್ಯಾಶನಲ್_ಸ್ಕೂಲ್
#ಕಲಾಂಜಲಿ
#ವಾರ್ಷಿಕೋತ್ಸವ
#ಡಿಸಿ_ಸಂಗಪ್ಪ
#ಮಕ್ಕಳ_ಪ್ರತಿಭೆ
#ಪ್ರತಿಭಾ_ಪುರಸ್ಕಾರ
#ಶಿಕ್ಷಣ
#ಮೌಲ್ಯಯುತ_ಶಿಕ್ಷಣ
#ParentsAndStudents
#CulturalProgram
#SchoolNews
#LocalNews
#NorthKarnataka
#BagalkotNews

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ