ಇಲಕಲ್ಲ: ಬೈಕ್ ಕಳ್ಳತನ: ಇಬ್ಬರ ಬಂಧನಬೈಕ್ ವಶ

ಇಲಕಲ್: ನಗರದ ಎನ್.ಆರ್. ಪಾಟೀಲ ಆಸ್ಪತ್ರೆ ಸಮೀಪದ ಎನ್‌ಎಚ್–50 ರಸ್ತೆಯಲ್ಲಿ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರನ್ನು ತಡೆದು ವಿಚಾರಣೆ ನಡೆಸಿದ ಇಳಕಲ್ ಶಹರ ಪೊಲೀಸರು, ಸುಮಾರು ₹8 ಲಕ್ಷ ಮೌಲ್ಯದ ಐದು ಮೋಟಾರ್ ಸೈಕಲ್‌ಗಳನ್ನು ಪತ್ತೆಹಚ್ಚಿದ್ದಾರೆ.

Petkarmedia:ಇಳಕಲ್ ಶಹರ ಪೊಲೀಸರು

Petkarmedia:ಕಳ್ಳತನವಾಗಿದ್ದ ಬೈಕ್ ಗಳು

ದಿನಾಂಕ 15.01.2026 ರಂದು ಮಧ್ಯಾಹ್ನ 12.30 ಗಂಟೆ ಸುಮಾರಿಗೆ, ಪಿಎಸ್‌ಐ (ಕಾಸು) ಮಂಜುನಾಥ ಪಾಟೀಲ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಗಸ್ತು ನಡೆಸುತ್ತಿದ್ದ ವೇಳೆ, ಪೇಕ್ ನಂಬರ್ ಪ್ಲೇಟ್ ಅಳವಡಿಸಿದ್ದ ಹೊಂಡಾ ಶೈನ್ ಬೈಕ್‌ನಲ್ಲಿ ತಿರುಗಾಡುತ್ತಿದ್ದ ಆರೋಪಿತರನ್ನು ತಡೆದು ನಿಲ್ಲಿಸಿದರು. ವಿಚಾರಣೆಗೆ ಒಳಪಡಿಸಿದಾಗ, ಅವರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಬಂಧಿತ ಆರೋಪಿತರನ್ನು

ಪ್ರತಾಪ  ನಾಯಕ (34), 

ಎಂ. ಭೋಜರಾಜ  (35)

ಎಂದು ಗುರುತಿಸಲಾಗಿದೆ.

ಮೇಲಾಧಿಕಾರಿಗಳಾದ ಪೊಲೀಸ್ ಅಧೀಕ್ಷಕರು ಸಿದ್ದಾರ್ಥ ಗೋಯಲ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಪ್ರಸನ್ನ ದೇಸಾಯಿ, ಪೊಲೀಸ್ ಉಪಾಧೀಕ್ಷಕರು ಸಂತೋಷ ಬನ್ನಟ್ಟಿ ಹಾಗೂ ಸಿಪಿಐ ಎಸ್.ಬಿ. ಆಜೂರ ಅವರ ಮಾರ್ಗದರ್ಶನದಲ್ಲಿ ನಡೆದ ತನಿಖೆಯಲ್ಲಿ, ಆರೋಪಿತರು ಕಳೆದ ಸುಮಾರು ಒಂದು ವರ್ಷದ ಅವಧಿಯಲ್ಲಿ ಇಳಕಲ್, ಹೊಸಪೇಟೆ ಮತ್ತು ಶಿಗ್ಗಾಂವ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡಿದ್ದ 3 ರಾಯಲ್ ಎನ್‌ಫೀಲ್ಡ್ ಮತ್ತು 2 ಹೊಂಡಾ ಕಂಪನಿಯ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಪಿಎಸ್‌ಐ ಸಿ.ಬಿ. ಕಿರಶ್ಯಾಳ, ಠಾಣಾ ಸಿಬ್ಬಂದಿಗಳಾದ ಸಿ.ಬಿ. ಜವಳಗೇರಿ, ಬಿ.ವಿ. ಕಟಗಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು ಎಂದು ಇಳಕಲ್ ಶಹರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

#IlkalPolice #BikeTheftCase #CrimeNews #Bagalkot #PoliceAction #RoyalEnfield #HondaBike #LawAndOrder 🚓

ಕಾಮೆಂಟ್‌ಗಳು